CATEGORY ARCHIVE

UncategorizedStories & Reflections

Dec 17, 2021
📖 3+ Chapters

ಅಂತರಂಗದ ತೆರೆ ಸರಿದಾಗ

ಕಣ್ಣೀರ  ಧಾರೆ  ಅಪೇಕ್ಷಳ ಕಣ್ಣಲ್ಲಿ .ಪಕ್ಕದಲ್ಲೇ ಕುಳಿತಿದ್ದ ತನ್ನಿನಿಯನನ್ನು  ನೋಡಲು ಇಷ್ಟವಿಲ್ಲ ಆಕೆಗೆ ..ಬಲವಂತದ ಮದುವೆಯದು ..ಗಟ್ಟಿಮೇಳ…ಗಟ್ಟಿಮೇಳ…ಪೂರೋಹಿತರ ಧ್ವನಿ.ಪಕ್ಕದಲ್ಲಿದ್ದ  ಕಿರಣ್ ಕೈಗೆ ತಾಳಿ ಬಂತು…ಬೇಗ ಕಟ್ಟಪ್ಪ ..ಧ್ವನಿಯೊಂದು  ಹೇಳಿತು.ಅದು ಅಮ್ಮನ ಧ್ವನಿ ..ತಲೆ   ತಗ್ಗಿಸಿ  ಕುಳಿತ  ಅಪೇಕ್ಷಾಳಿಗೆ  ಎಲ್ಲಾ ಮುಗಿದು ಹೋದ ಅನುಭವ.ಈ ಮದುವೆ ನನಗೆ ಬೇಡ ಅಂತ ಪ್ರತಿಭಟಿಸಿ ಹೋರಾಡಿ ಸತ್ಯಾಗ್ರಹಹೂಡಿದ್ದು  ಆಗಿತ್ತು. ಹೂ ..ಹೂಂ ..ಯಾವ ಪ್ರಯೋಜನವೂ  ಆಗಿರಲಿಲ್ಲ ..ಇವಳ ಮಾತೇ ಕಿವಿಗೆ ಬೀಳದವರ  ಹಾಗೆ ವರ್ತಿಸಿದ್ದರು ಹೆತ್ತವರು ..ಕೆಟ್ಟ ಕೋಪ  ಬಂದಿತ್ತು ಅವಳಿಗೆ […]

Read More →
Jun 1, 2022
📖 4+ Chapters

ಒಲವಿನ ರಾಗ

ನಿಶಾ..ನಿಶಾ..ಎಲ್ಲಿದ್ದೀಯ?ಹೆಂಡತಿಯ ಕೂಗುತ್ತ ಮನೆ ಒಳ ಬಂದ ಪ್ರಶಾಂತ್.ಕೈಯಲ್ಲಿದ್ದ  ಬ್ಯಾಗ್ ಹೊತ್ತು ಒಳ ಬಂದ.ಉಷಪ್ಪ!!..ಕೈಯಲ್ಲಿದ್ದ  ಬ್ಯಾಗ್ ನೆಲದಲ್ಲಿಟ್ಟ. ಅಡುಗೆ ಮನೆಗೆ ಹೋಗಿ ನೀರು ಕುಡಿದ.ಹಾಗೆ ಅಡುಗೆ ಮನೆ ನೋಡಿದ.ಒಂದೂ ವಸ್ತು ಸರಿಯಾದ ಜಾಗದಲ್ಲಿಲ್ಲ.ಮಾಡಿದ ಅಡುಗೆ ಮುಚ್ಚುವರಿಲ್ಲದೇ  ಬಾಯಿ ತೆರೆದುಕೊಂಡು ಕುಳಿತಿದೆ.ಯಾವ್ಯಾವೋ ಹುಳುಗಳು  ಅದರ ಸುತ್ತ ಓಡಾಡುತ್ತಿವೆ. ನೊಣಗಳು  ಗುಯೆನ್ನುತ್ತ  ಓಡಾಡುತ್ತಿವೆ ಹೆಚ್ಚಿದ ಈರುಳ್ಳಿ ಸಿಪ್ಪೆ, ಲಿಂಬೆ ಹಣ್ಣಿನ ಸಿಪ್ಪೆ, ಉಳಿದಿರೋ ಕರಿಬೇವಿನ ಸೊಪ್ಪು ಎಲ್ಲ ಅಲ್ಲೇ ಬಿದ್ದಿವೆ.ಯಾಕೋ ಇವತ್ತು ಹೆಂಡತಿಯ ಮೂಡು ಸರಿ ಇಲ್ಲ ಅಂತ ಅರ್ಥವಾಯಿತು.ಅವಳಿಗಾಗಿ ಮನೆಯಲ್ಲ […]

Read More →
Jun 25, 2025
📖 3+ Chapters

ಒಂದು ಸಂಸಾರದ ಕಥೆ

ಒಂದು ಸಂಸಾರ. ಗಂಡ,ಹೆಂಡತಿ ,ಒಂದು ಪುಟ್ಟ ಮಗು..ಹೊರಗಿಂದ ನೋಡಲೇನೋ ಅತ್ತುತ್ತಮ, ಸುಂದರ ಸಂಸಾರ.ಒಳಗೆ ಮಾತ್ರ ಗುದ್ದಾಟ..ಅದೂ ಸರಳಾಳಿಂದ.ಹೆಸರೇನೋ ಸರಳ. ಆದರೆ ಆಕೆ ಯಾವ ರೀತಿಯಿಂದಲೂ ಸರಳವಾಗಿಲ್ಲ .ಆಡಂಬರದ,ಡೌಲಿನ ಜೀವನದ ಕನಸು ಹೊತ್ತವಳು.ಗಂಡನೇನೋ ಇವಳು ಹೇಳಿದ ಹಾಗೆ ಕುಣಿಯುವವನು ಸಿಕ್ಕ. ಆದರೆ ಇವಳ ಮುಗಿಯದ, ತೀರದ, ಆಡಂಬರದ ಜೀವನ  ಕೊಡುವವನಲ್ಲ.ತಾನಾಯಿತು ತನ್ನ ಕೆಲಸವಾಯಿತು ,ಜೀವನವಾಯಿತು ಅನ್ನೋ ಜೀವವದು.ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವ  ತತ್ವದವನು.ಈ ಅಬ್ಬರದ, ಜೊಳ್ಳು,ಟೊಳ್ಳು ಆಡಂಬರ ನಮಗೇಕೆ? ಎನ್ನುತಿದ್ದ ಹೆಂಡತಿಗೆ.ಆದರೆ ಅದು ಆಕೆಯ ಕಿವಿಗೆ ಬಿದ್ದಂತೆ […]

Read More →
Jun 30, 2021
📖 5+ Chapters

ಗುಂಡ ಗುಂಡಿಯ ಹಾಸ್ಯ ಪ್ರಸಂಗಗಳು

ದಿನ  ಬೆಳಗಾದರೆ ಲಟ ಪಟ ಅಂತ ಓಡಾಡೋ  ಗುಂಡಿ ಸಪ್ಪಗೆ ಮೂಲೆ  ಹಿಡಿದ್ದಿದ್ದ ಗುಂಡಾ ನೋಡಿ ,ಆಶ್ಚರ್ಯ ಪಟ್ಟ.ಹೀಗೆಲ್ಲ ಸುಮ್ಮನೆ ಕುಳಿತವಳೇ ಅಲ್ಲ …ಇಲ್ಲದ  ಸಲ್ಲದ  ಗದ್ದಲ ಮಾಡುತ್ತಾ,…ನನ್ನ ಬೈಯುತ್ತಾ ಬಿಮ್ಮನೆ ತಿರುಗುತ್ತಿದ್ದವಳು …..ಈಗ ….ಹೀಗೆ …ಅರ್ಥವೇ  ಆಗದೇ ತಲೆ ಕರೆದುಕೊಂಡ .ಮುಂದೇನೂ …ನಾನೇ ಮಾತಾಡಿಸಲೇ ….ಹೂಂ …ಹೂ …ಧೈರ್ಯ ಸಾಲುತ್ತಿಲ್ಲ ….ಹಾಗೇ ..ಸುಮ್ಮನೆ    ಇರುವಂತೆಯೂ  ಇಲ್ಲ …ತಲೆ ಕೆಟ್ಟ ಗುಂಡಿ ಏನು ಮಾಡುವಳೋ  ಗೋತ್ತಿಲ್ಲ….ಏನು ವಿಷಯ ಕೇಳಿ  ತಿಳಿದುಕೊಳ್ಳೋಣ …ಪರಿಹಾರ  ಅವಳೆ  ಹುಡುಕಿಕೊಳ್ಳುತ್ತಳೆ ….ಅಂತ ತನಗೆ  […]

Read More →
Aug 2, 2025
📖 6+ Chapters

ಪ್ರೇಮದ ಸುಳಿಯಲ್ಲಿ

ಅಧ್ಯಯ – ೧ ನೋಡಿದಷ್ಟೂ ನೋಡಬೇಕೆನ್ನುವ ರೂಪವತಿ..ಕಾದಂಬರಿಗಳಲ್ಲಿ  ವರ್ಣಿಸಿದಂತೆ, ಕವಿಗಳ ಕವನದಲ್ಲಿರುವಂತೆ, ಚಿತ್ರಕಾರರ  ಕೈಯಲ್ಲಿ ಅರಳಿ ನಿಂತ  ಒಂದು ಸುಂದರ ವರ್ಣ ಚಿತ್ರದಂತೆ, ಬಲು ಅಪರೂಪದ  ಹೆಣ್ಣವಳು..ಸುಂದರಿಯರಲ್ಲಿ ಸುಂದರಿ ಆಕೆ…ಹೆತ್ತವರಿಗಂತೂ  ಅವಳನ್ನು  ಎಲ್ಲಿಟ್ಟರೂ ತೃಪ್ತಿಯಿಲ್ಲ ..ಮೊದಲೇ ಶ್ರೀಮಂತ ಕುಟುಂಬ..ಒಂದೇ ಒಂದು  ಸಂತಾನ  ಬೇರೆ..ಲಕ್ಷ್ಮಿಯ  ಪೂರ್ಣ  ಕಟಾಕ್ಷ  ಇವರ ಮೇಲೆ ಇತ್ತೂಂತ  ಕಾಣುತ್ತೆ..ಮುಟ್ಟಿದ್ದೆಲ್ಲ  ಬಂಗಾರ..! ಮಾಡುವ  ಬಿಸಿನೆಸ್ ಎಲ್ಲ ಸಕ್ಸಸ್..!ಆಕೆಯನ್ನು  ಆ ಮನೆಯ ಮಹಾಲಕ್ಷ್ಮಿಗೆ  ಹೋಲಿಸುತಿದ್ದರು ..ಆಕೆ ಹುಟ್ಟಿದ ಮೇಲೆಯೇ ಅವರಿಗೆಲ್ಲ  ಏಳಿಗೆ ಆಗಿತ್ತಂತೆ. ಹೀಗಾಗಿ  ಆಕೆ ಎಲ್ಲರ […]

Read More →
Sep 11, 2026

ಆರ್ಟ್ ಒಫ್ ಲಿವಿಂಗ್

ನಾವೆಲ್ಲ ಗೆಳತಿಯರು ಶ್ರೀ ಶ್ರೀ ರವಿಶಂಕರ ಗುರೂಜಿ ‘ ಆಶ್ರಮಕ್ಕೆ ಹೋಗಬೇಕೆಂದು ನಿರ್ಧರಿಸಿದೆವು . ಅದಕ್ಕೆ ಒಂದು ಕಾರಣವೂ ಇತ್ತು .ತುಂಬಾ ದಿನಗಳಿಂದ ಮನದಲ್ಲೇ ಮಂಡಿಗೆ ತಿನ್ನುತ್ತಾ ಕುಳಿತವರಿಗೆ ಅವರ ಆಶ್ರಮದಿಂದಲೇ ಕರೆ ಬಂದರೆ ಹೇಗಾಗಿರಬೇಡ . ?ಖುಷಿ ಖುಷಿಯೆಂದಲೇ ತಯಾರಾದೆವು . ನೋಡಿ …… … ಟೈಮ್ ಅಂದರೆ ಇದೇ ಅಲ್ಲವೇ ?… ನಮ್ಮೆಲ್ಲರ ಸೌಭಾಗ್ಯ ಅನ್ನಬೇಕೋ ?…….ಗುರೂಜಿಯ ವರು ಆಶ್ರಮದಲ್ಲಿವಾಗಲೇ ನಮಗೆಲ್ಲ ಕರೆ ಬಂದಿದ್ದು . . …ಸರಿ …. ಒಟ್ಟಾಗಿ ಹೊರಟೆವು .ನಮ್ಮ […]

Read More →
Connect with Me