ಆರ್ಟ್ ಒಫ್ ಲಿವಿಂಗ್

ನಾವೆಲ್ಲ ಗೆಳತಿಯರು ಶ್ರೀ ಶ್ರೀ ರವಿಶಂಕರ ಗುರೂಜಿ ' ಆಶ್ರಮಕ್ಕೆ ಹೋಗಬೇಕೆಂದು ನಿರ್ಧರಿಸಿದೆವು . ಅದಕ್ಕೆ ಒಂದು ಕಾರಣವೂ ಇತ್ತು .
ತುಂಬಾ ದಿನಗಳಿಂದ ಮನದಲ್ಲೇ ಮಂಡಿಗೆ ತಿನ್ನುತ್ತಾ ಕುಳಿತವರಿಗೆ ಅವರ ಆಶ್ರಮದಿಂದಲೇ ಕರೆ ಬಂದರೆ ಹೇಗಾಗಿರಬೇಡ . ?
ಖುಷಿ ಖುಷಿಯೆಂದಲೇ ತಯಾರಾದೆವು . ನೋಡಿ ...... ... ಟೈಮ್ ಅಂದರೆ ಇದೇ ಅಲ್ಲವೇ ?... ನಮ್ಮೆಲ್ಲರ ಸೌಭಾಗ್ಯ ಅನ್ನಬೇಕೋ ?.......
ಗುರೂಜಿಯ ವರು ಆಶ್ರಮದಲ್ಲಿವಾಗಲೇ ನಮಗೆಲ್ಲ ಕರೆ ಬಂದಿದ್ದು . . ...ಸರಿ .... ಒಟ್ಟಾಗಿ ಹೊರಟೆವು .
ನಮ್ಮ ಜಾಗದಿಂದ ಸುಮಾರು ಒಂದು ಘಂಟೆ ಪ್ರಯಾಣ .. ದಾರಿಯುದ್ದಕ್ಕೂ ಹಾಡು ಹಾಡುವವ ರಿದ್ದರೆ, ಸುಮ್ಮನೆ ಪ್ರಕೃತಿ
ಸವಿಯುವವರು ಕೆಲವರು .. ಮಕ್ಕಳೋ ಖುಷಿಯಿಂದ ಕುಪ್ಪಳಿಸುತ್ತಿದ್ದವು ..
ಆಶ್ರಮದ ಗೇಟಿನಲ್ಲೇ ಗುರೂಜಿಯವರ ನಗುಮುಖ ದ ಕಟ್- ಔಟ್ ಕಾಣಿಸಿದಾಗ ಸಂಭ್ರಮ .. .. ನಿದಾನವಾಗಿ ಬಸ್ಸಿನಿಂದ
ಇಳಿದಾಗ ಕಣ್ಣಿಗೆ ಕಂಡದ್ದು ವಿಶಾಲವಾದ ಆಶ್ರಮ ....... ಕಣ್ಣು ತುಂಬುವಷ್ಟು ಹಸಿರು ....
ಸ್ನೇಹಿತರೇ ..... ಬೆಂಗಳೂರಿನ್ನಲ್ಲಿರವ ನಮಗೆ ಆ ಹಸಿರು , ಆ ಪ್ರಶಾಂತತೆ ಮರೀಚಿಕೆ ....... ತೃಪ್ತಿ ಯಾಗುವಷ್ಟು ಕಣ್ಣುಗಳನ್ನು ತುಂಬಿಕೊಂಡೆವು .. ಊಟದ ವೇಳೆ ಯಾದುದರಿಂದ ನೇರವಾಗಿ 'ಅನ್ನಪೂರ್ಣ ಭೋಜನಾಲಯಕ್ಕೆ'''' ತೆರಳಲು ಕಾರ್ಯಕರ್ತರು ಆದೇಶಿಸಿದರು .
ಅಬ್ಬಾ :...... ಎಂಥಾ ಊಟ .... ಅನ್ನ . ಸಾರು . ಚಪಾತಿ .ಪಲ್ಯ ... ಮೇಲೆ .. ಸಿಹಿಯಾದ ಪಾಯಸ ........ ಹೊಟ್ಟೆ .. ಮನ ತುಂಬಿತು .. ರುಚಿಕಟ್ಟಾದ ಊಟ .... ಆಶ್ರಮದಲ್ಲೇ ಬೆಳೆದ ರಾಸಾಯನಿಕವಿಲ್ಲದ ತರಕಾರಿಗಳಿಂದ ತಯಾರಾದ ಸಾತ್ವಿಕ ಭೋಜನ . ಹೊಟ್ಟೆ ಜೊತೆಗೆ
ಮನಸ್ಸಿಗೆ ಏನೋ ಆನಂದ .. ...
ಅಲ್ಲಿ ಇಷ್ಟ ಬಂದವರು ಯಾವ ರೀತಿಯ ಸೇವೆಯನ್ನಾದರು ಸಲ್ಲಿಸಬಹುದು ... ಇದೊಂದು ರೀತಿಯ ಜನಸೇವೆ . ಆಶ್ರಮದ ತುಂಬ
ಗುರೂಜಿಯವರ ಕಾರ್ಯಕರ್ತರು ಓಡಾಡುತ್ತಿದ್ದರು .. ಪ್ರಶಾಂತ ಮುಖ ಹೊದ್ದ ಅವರು ಸಹಾಯಕ್ಕೆ ತುಂಬು ಹೃದಯದಿಂದ ಬರುತ್ತಾರೆ . ಅದೇ ಇರಬೇಕೇನೋ ಸೇವಾ ಮನೋಭಾವ ಅಂದರೆ .. ತನ್ನಂತೆ ಪರರು ಅನ್ನೋ ಭಾವನೆ .. .. ಧನ್ಯರು ....
ದೇಶ . ಭಾಷೆ . ಜಾತಿ . ಲಿಂಗ , ವಯಸ್ಸಿನ ಭೇದವಿಲ್ಲದೆ ಒಟ್ಟಾಗಿ ಕುಳಿತು ಒಂದೇ ಸೂರಿನಡಿ ಕುಳಿತು ಭೋಜನ ಸವಿಯುವದು ಅಂದರೆ ಇದೇ ಏನೋ ....... ;'
ಸ್ನೇಹಿತರೇ ...... ನಮಗೆ ಮಾರ್ಗದರ್ಶನ ಮಾಡುತ್ತಿದ್ದವರು ಅಂಕಿತ ' ಎಂಬ ಕಾರ್ಯಕರ್ತೆ .. ತುಂಬಾ ಒಳ್ಳೆಯವರು .. ಮುಂದೆ
ಆಶ್ರಮವನ್ನು ತೋರಿಸಿದವರು ಅವರೇ .. ವಿಶಾಲಾಕ್ಷಿ ಧ್ಯಾನ ಮಂದಿರದ ಕಡಗೆ.... ತಮ್ಮ ತಾಯಿಯವರ ಹೆಸರಿನಲ್ಲಿ ಗುರೂಜಿಯವರು
ಕಟ್ಟಿಸಿದ ಕಮಲದ ಆಕಾರದಲ್ಲಿರುವ ಮಂದಿರ .. ಎಷ್ತ್ತೋ ಜನ ಅದ್ಯಾವದೋ ಕೋರ್ಸ್ ಮಾಡುವವರು ಒಳಗೆ ಇದ್ದರು . ... ಜನವೋ
ಜನ ... .. ಅಲ್ಲಿಲ್ಲಿ ಕುಳಿತು ಧ್ಯಾನ ಮಾಡುವವರು .... ಗುರೂಜಿಯವರ ದರ್ಶನಕ್ಕಾಗಿ ಕಾಯುತ್ತ ಇರುವವರು ...ಎಲ್ಲಿ.. ನೋಡಿದಲ್ಲಿ ಜನಜಾತ್ರೆ

ಯಜ್ಜ್ಞ ಶಾಲೆ . .... ಗೋಶಾಲೆ . ..... ಗುರುಕುಲ ...... ಹೀಗೆ ಆಶ್ರಮದಲ್ಲಿರುವ ಕಟ್ಟಡಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ .. ನಮಗೆ ಗುರೂಜಿಯವರ ಭೇಟಿ ಯ ವೇಳೆ ಯಾದುದರಿಂದ ನೇರವಾಗಿ ಅವರು ಭೇಟಿಯಾಗಿವ ಸ್ಥಳಕ್ಕೆ ಹೋದೆವು .. ಸಾಲಾಗಿ ಎದುರು ಬದಿರಾಗಿ
ಜಾತಕ ಪಕ್ಷಿಯಂತೆ ಕುಳಿತೆವು .. ಕುಳಿತವರ ಮನದಲ್ಲಿ ಗುರೂಜಿಯವರ ನೀರಿಕ್ಷೆ ...... ಅದೋ...... .... ಬಂದೇ ಬಿಟ್ಟರು ... ನಿಧಾನವಾಗಿ ನಡೆಯುತ್ತಾ . ಎಲ್ಲರನ್ನೂ ಮಾತನಾಡಿಸುತ್ತಾ . ಆಶೀರ್ವದಿಸುತ್ತ ... ಜನರ ಸಮಸ್ಸೆಗಳಿಗೆ ಉತ್ತರಿಸುತ್ತ ಬರುತ್ತಿದ್ದರು ... ಕುಳಿತಲ್ಲಿ ಕೈ ಮುಗಿದು
ಎದುರಿಗೆ ಬಂದ ಗುರೂಜಿಯವರೆಗೆ ನಮಸ್ಕರಿಸುವಾಗ ಏನೋ ಧನ್ಯ ಭಾವನೆ .. ನಾವೆಲ್ಲಾ ಎಂಥ ಪುಣ್ಯವಂತರು ಅಂತ ಮನಸ್ಸಿಗನ್ನಿಸಿತು ಜೀವನದಲ್ಲಿ ಬಹು ಬೇಗ ಆ ಮಹಾತ್ಮರ ದರ್ಶನವಾಯಿತು ... ಆ ಮುಖದಲ್ಲಿ ಎಂಥ ಕಳೆ ... ನಮ್ಮನ್ನು ನಾವು ಮರೆಯುವಂಥ ಕ್ಷಣ ..... ಸ್ನೇಹಿತರೇ ....... ಒಂದು ಮಾತು ...... ಜಗತ್ತಿನಾದ್ಯಂತ ಎಷ್ಟೋ ಜನರು ಇಲ್ಲಿಗೆ ಬರುವರು .... ಸಮಸ್ಸೆಗಳ ಮಾಲೆ ತರುವರು .. ಅದಕ್ಕೆಲ್ಲ ಸ್ಪಂದಿಸಿ ಅವರನ್ನು ನೋವಿನಿಂದ ಮುಕ್ತಿಗೊಳಿಸುವ ಗುರೂಜಿಯವರು ತುಂಬಾ ದೂಡ್ಡ ವ್ಯಕ್ತಿ .. ದೈವ ಶಕ್ತಿ ಊಳ್ಳವರು ....
ಸ್ನೇಹಿತರೇ ..... ಇದಕ್ಕೆಲ್ಲ ಕಾರಣರಾದ ನಮ್ಮ ಗುರುಗಳಾದ ' ಚಂದನಾ '' ಅವರನ್ನು ನೆ ನೆಯಲೆಬೇಕು ... ಆಶಮದಿಂದ ಹೊರ ಬರುವಾಗ ಮನಸ್ಸು ಪ್ರಫ್ಫುಲ್ಲ ..... ಮನಸಲ್ಲೇ ಮತ್ತೆ ಬರುವ ಆಶಯದಿಂದ ಮನೆ ಸೇರಿದೆವು ...
'' ಸರ್ವೇ ಭವಂತು ಸುಖುನೋಭವಂತು ''

Leave a Review

Share your thoughts and read what others had to say

Your Review

Did this story spark a memory or artistic inspiration? Share your thoughts below.

★ ★ ★ ★ ★
🌸

No reviews yet

Be the first to share your thoughts on this story!

← Previous Story ಪ್ರೇಮದ ಸುಳಿಯಲ್ಲಿ
Connect with Me