ಅಂತರಂಗದ ತೆರೆ ಸರಿದಾಗ

ಕಣ್ಣೀರ  ಧಾರೆ  ಅಪೇಕ್ಷಳ ಕಣ್ಣಲ್ಲಿ .ಪಕ್ಕದಲ್ಲೇ ಕುಳಿತಿದ್ದ ತನ್ನಿನಿಯನನ್ನು  ನೋಡಲು ಇಷ್ಟವಿಲ್ಲ ಆಕೆಗೆ ..ಬಲವಂತದ ಮದುವೆಯದು ..
ಗಟ್ಟಿಮೇಳ...ಗಟ್ಟಿಮೇಳ
...ಪೂರೋಹಿತರ ಧ್ವನಿ.
ಪಕ್ಕದಲ್ಲಿದ್ದ  ಕಿರಣ್ ಕೈಗೆ ತಾಳಿ ಬಂತು...ಬೇಗ ಕಟ್ಟಪ್ಪ ..ಧ್ವನಿಯೊಂದು  ಹೇಳಿತು.ಅದು ಅಮ್ಮನ ಧ್ವನಿ ..
ತಲೆ   ತಗ್ಗಿಸಿ  ಕುಳಿತ  ಅಪೇಕ್ಷಾಳಿಗೆ  ಎಲ್ಲಾ ಮುಗಿದು ಹೋದ ಅನುಭವ.ಈ ಮದುವೆ ನನಗೆ ಬೇಡ ಅಂತ ಪ್ರತಿಭಟಿಸಿ ಹೋರಾಡಿ ಸತ್ಯಾಗ್ರಹಹೂಡಿದ್ದು  ಆಗಿತ್ತು.

ಹೂ ..ಹೂಂ

..ಯಾವ ಪ್ರಯೋಜನವೂ  ಆಗಿರಲಿಲ್ಲ ..ಇವಳ ಮಾತೇ ಕಿವಿಗೆ ಬೀಳದವರ  ಹಾಗೆ ವರ್ತಿಸಿದ್ದರು ಹೆತ್ತವರು ..
ಕೆಟ್ಟ ಕೋಪ  ಬಂದಿತ್ತು ಅವಳಿಗೆ ..ಒಂದು ಚೂರು  ಅರ್ಥವಿಲ್ಲದವರು  ಇವರು ಅನ್ನೋ ನಿರ್ಧಾರಕ್ಕೆ ಬಂದಿದ್ದಳು ..ಇದು  ನನ್ನ ಮದುವೆ ..ಆದರಿಲ್ಲಿ  ನನ್ನಿಷ್ಟ ಕೇಳೋರಿಲ್ಲ ...ಛೇ .
.ಎಂಥ ದುರ್ದೈವ ನಂದು ..
ಅಕ್ಕಿಕಾಳು ಬಿದ್ದವು ತಲೆ ಮೇಲೆ ....ವಿಚಾರ ಲಹರಿಗೆ ವಿರಾಮ ಬಿತ್ತು .
ಅತ್ತೂ ಅತ್ತೂ ಕಣ್ಣುಗಳು ಮುಖವೆಲ್ಲ ಬಾತು ಹೋಗಿತ್ತು ..ಸದ್ಯ ..ತೆಳು ದುಪ್ಪಟ್ಟಾದಿಂದಾಗಿ  ಸರಿಯಾಗಿ ಮುಖ ಕಾಣುತ್ತಿರಲಿಲ್ಲ ಎಲ್ಲರಿಗೂ ..
ಅಬ್ಬಬ್ಬಾ ...ಎಷ್ಟು ಖುಷಿನೋಡು ಎಲ್ಲರಿಗೂ.
ಮೆಲ್ಲನೆ ಕಿರಣ್ ಕಡೆ ಕಳ್ಳ ದೃಷ್ಟಿ ಬೀರಿದಳು .

ತಲೆ ಮೇಲಿನ ಅಕ್ಕಿ ಕಾಳನ್ನ ಕೊಡಹುತ್ತಿದ್ದ ..ನಡು ನಡುವೆ  ಗೆಳೆಯರ ಮಾತಿಗೆ  ನಗುತಿದ್ದ ...ಅಸೂಯೆಯಾಯಿತು  ಒಂದು ಕ್ಷಣ....ಇರಲಿ ..ಮಾಡತೀನಿ  ಇವನಿಗೆ...ಹಿಂದು ಮುಂದೂ ಗೊತ್ತಿಲ್ಲದೇ ಮದುವೆಯಾದ ಕಿರಣ್ ಏನೂ ಅರಿಯದೇ  ತನ್ನ ಬಾಳ ಸಂಗಾತಿಯ ನೋಡಿ ನಸುನಕ್ಕ.
ಪ್ರತಿಯಾಗಿ ಅಪೇಕ್ಷ  ನಗಲಿಲ್ಲ.ನಾಚಿಕೆ ಎಂದುಕೊಂಡ ವರ  ಮಹಾಶಯ ..
ಅಪೇಕ್ಷ  ಏಳು...ದೊಡ್ಡವರ ಕಾಲಿಗೆ ನಮಸ್ಕರಿಸು ..ಅಮ್ಮನ ಸ್ವರ ಕೇಳಿತು ..ನವ ದಂಪತಿಗಳು  ಒಟ್ಟಿಗೆ ಎದ್ದರು ..ಕೈ ಹಿಡಿದ ಕಿರಣ್ ಕೈ ಕೊಸರಿಕೊಂಡಳು ..ಹಿರಿಯರೆಲ್ಲ ಸಾಲಾಗಿ ಕುಳಿತಿದ್ದರು ..ಭರ ಭರ ಹೆಜ್ಜೆ ಇಡಲು ಕಷ್ಟ ಪಡುತ್ತಿದ್ದಳು ..ಮೈ ಮೇಲೆ ಮಣ ಬಂಗಾರ ..ಭಾರದ  ಜರಿ ಸೀರೆ ನಡೆಯಲು ಆಗದೆ ಮುಗ್ಗರಿಸಿದಳು ..ತಟ್ಟನೆ  ಮುಂದೆ ಬಂದ ಕಿರಣ್ ಕೈ ಹಿಡಿದ ..ಇರುಸು ಮುರುಸಾಯಿತು ಇವಳಿಗೆ ..
ಛೇ ..
ಏನ್ ಈ ಮನುಷ್ಯ ...ಆದಷ್ಟೂ ದೂರ  ಇರ್ಬೇಕು ..ಅಂದುಕೊಂಡಳು ..
ನೂರು ವರ್ಷ  ಮುತೈದೆಯಾಗಿ  ಬಾಳಮ್ಮ ..ಅತ್ತೆ ಆಶೀರ್ವಾದ ಕೇಳಿತು.

ಮುಂದುವರಿಯುವದು .....

ಧಾರಾವಾಹಿಯಾಗಿ ಇದು ನನ್ನ ಮೊದಲ ಪ್ರಯತ್ನ.
ಪ್ರತಿಲಿಪಿ ಸ್ನೇಹ ಬಳಗದವರಿಗೆ ನನ್ನ ಮನವಿ ..ಓದಿ ಪ್ರೋತ್ಸಾಹಿಸಿ..
ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ.🙏🏼🙏🏼🙏🏼

Leave a Review

Share your thoughts and read what others had to say

Your Review

Did this story spark a memory or artistic inspiration? Share your thoughts below.

★ ★ ★ ★ ★
🌸

No reviews yet

Be the first to share your thoughts on this story!

Connect with Me