ಒಲವಿನ ರಾಗ
ನಿಶಾ..ನಿಶಾ..ಎಲ್ಲಿದ್ದೀಯ?ಹೆಂಡತಿಯ ಕೂಗುತ್ತ ಮನೆ ಒಳ ಬಂದ ಪ್ರಶಾಂತ್.ಕೈಯಲ್ಲಿದ್ದ ಬ್ಯಾಗ್ ಹೊತ್ತು ಒಳ ಬಂದ.ಉಷಪ್ಪ!!..ಕೈಯಲ್ಲಿದ್ದ ಬ್ಯಾಗ್ ನೆಲದಲ್ಲಿಟ್ಟ. ಅಡುಗೆ ಮನೆಗೆ ಹೋಗಿ ನೀರು ಕುಡಿದ.ಹಾಗೆ ಅಡುಗೆ ಮನೆ ನೋಡಿದ.ಒಂದೂ…
Read More →ಅರೇ ...ಬರೀ ಅಷ್ಟೇ ಆಶೀರ್ವಾದ ಮಾಡಿದ್ರೆ ಹೇಗೆ ?ನೂರು ಮಕ್ಕಳು ಬೇಡ್ವಾ?..ಯಾರೋ ಕಿಡಿಗೇಡಿಗಳ ಧ್ವನಿ ...
ಅವಡುಗಚ್ಚಿದಳು ಅಪೇಕ್ಷ ...ಇರಲಿ ..ಮಾಡ್ತೀನಿ ಒಬ್ಬಬ್ಬರಿಗೂ ..
ಎಲ್ಲರ ಕಾಲುಮುಟ್ಟಿ ಆಶೀರ್ವಾದ ಪಡೆದ್ದಾಯಿತು ..
ಸುತ್ತಲೂ ನಗು ಕೇಕೆ....ಉಲ್ಲಾಸದ ವಾತಾವರಣ .ಸುತ್ತಲೂ ಇಳಿ ಬಿಟ್ಟ ಹೂವಿನ ವಾಸನೆ....ಇವಳ ಅಪ್ಪ ಕೃಷ್ಣ ರಾಯರು ಎಲ್ಲಿಂದಲೋವಿಶೇಷ ಅಲಂಕಾರ ಮಾಡುವವರನ್ನು ಕರೆಸಿದ್ದರು....ಒಬ್ಬಳೇ ಮುದ್ದಿನ ಮಗಳ ಮದುವೆ ..ಇಂದ್ರನ ಅರಮನೆಯಾಗಿತ್ತು ಮನೆ .. ಯಾವುದಕ್ಕೂ ಕುಂದು ಕೊರತೆಯಿಲ್ಲದಂತೆ ನೋ ಡಿಕೊಂಡಿದ್ದರು ..ಸುಗಂಧ ದ್ರವ್ಯಗಳ ಪರಿಮಳ, ..ಬೆಳಗುತ್ತಿದ್ದ ದೀಪಗಳು,ಮಂಗಳ ವಾದ್ಯಗಳ ಮೇಳ , ಹೆಂಗಸರ ಗಲ ..ಬಲ ಸದ್ದು..ಮಕ್ಕಳ ಓಡಾಟ..ಮಂಗಲಮಯದ ವಾತಾವರಣ..
ಅಪೇಕ್ಷ ಕತ್ತೆತ್ತಿ ಅಮ್ಮನ ಹುಡುಕಿದಳು ..ಹೊಟ್ಟೆ ತಾಳ ಹಾಕುತ್ತಿತ್ತು ..ಕಾಣಲಿಲ್ಲ ..ಯಾ ರಿಗೆ ಹೇಳುವದು ?..ಪಕ್ಕದಲ್ಲಿರೋ ಮಹರಾಯನೋ ಹರಟೆಯಲ್ಲಿ ಬಿಝಿ ...ಸ್ನೇಹಿತರ ದಂಡೇ ನಿಂತಿದೆ ಪಕ್ಕದಲ್ಲಿ ..ಏನೂ ತಿಳಿಯದೆ ಕುಳಿತಲ್ಲಿಯೇ ಒದ್ದಾಡಿದಳು ..
ಅಷ್ಟ್ರರಲ್ಲಿ ಯಾರೋ ಪೂಣ್ಯತ್ಮರು ಮದುಮಕ್ಕಳ ಊಟಕ್ಕೆ ರೆಡಿ ಮಾಡ್ರಪ್ಪ ...ಅಂದ ಧ್ವನಿ.
ಮೆಲ್ಲನೆ ಊಟದ ಹಾಲ್ ಗೆ ಕರೆದುಕೊಂಡು ಹೋದರು.
ದೊಡ್ಡ ಹಾಲ್ ...ಹೂವುಗಳಿಂದ ತುಂಬಿ ಹೋಗಿತ್ತು ..ಮಧ್ಯೇ ದೊಡ್ಡದಾದ ೧೦ ಕುಳಿತು ಕೊಳ್ಳಬಹುದಾದ ಟೇಬಲ್....ವೆಲ್ವೆಟ್ ಬಟ್ಟೆಯಿಂದ ಅಲಂಕೃತವಾಗಿದೆ ..
ಬಗೆ ಬಗೆ ಮೃಷ್ಟಾನ್ನ ಬೋಜನಗಳು ಬೆಳ್ಳಿ ತಟ್ಟೆಗಳಲ್ಲಿ ಸಾಲಾಗಿ ಜೋಡಿಸಿಡಲಾಗಿತ್ತು ..
ಬೆಳ್ಳಿ ಲೋಟಗಳಲ್ಲಿ ವಿವಿಧ ತಂಪು ಪಾನೀಯಗಳು....ಅಲ್ಲಲ್ಲಿ ಅಲಂಕಾರಿಕ ದೀಪಗಳು. ಊಟದ ಪರಿಮಳಕ್ಕೆ ಅಪೇಕ್ಷಾಳ ಹಸಿವು ಇನ್ನು ಹೆಚ್ಚಿತು.
ಕಿರಣ್ ಕಡೆ ನೋಡಿದರೆ ಬಾಯಿ ತುಂಬ ನಗು ತುಂಬಿಕೊಂಡು ಕಣ್ಣು ಕಿರಿದಾಗಿಸಿ ..ಮುಂದೆ ಬಂದ ತಲೆ ಗೂದಲನ್ನು ಹಿಂದೆ ತಳ್ಳುವದರಲ್ಲಿ ಬಿಝಿ ...
ಏನ್ ನಗು ನೋಡು ...ಹಲ್ಲು ಕಿಸೀತಿದ್ದಾನೆ..ಹೊಟ್ಟೆ ಮಾತಲ್ಲೇ ತುಂಬಿಸ್ಕೊತಾನೆ ಅಂತ ಕಾಣುತ್ತೆ ..
ಮೆಲ್ಲನೆ ಶರ್ಟ್ ಜಗ್ಗಿದಳು ...ಹೊಟ್ಟೆ
ಕಡೆ ಕೈ ತೋರಿಸಿದಳು .ಅರ್ಥವಾಯಿತು ಕಿರಣ್ ಗೆ ..ನಸು ನಕ್ಕು ಸರಿ ನಡಿ ಊಟ ಮಾಡೋಣ ಎಂದ.
ಯಾಕೋ ಮೊದಲ ನೋಟದಲ್ಲೇ ಇಷ್ಟವಾಗಿದ್ಲು ಅಪೇಕ್ಷಾ ಇವನಿಗೆ..ತುಂಟ ಹುಡುಗಿ ಎನಿಸಿತ್ತು.
ಇಂಥ ಒಳ್ಳೆ ಹುಡುಗಿ ಕೊಟ್ಟ ಆ ದೇವನಿಗೆ ಥ್ಯಾಂಕ್ಸ್ ಹೇಳಿದ್ದ.
ಕಣ್ಣಮುಂದೆ ಕೈ ಜೋಡಿಸಿ ನಿಂತ ಮಾವನ ಮುಖ ಬಂತು..ನಮ್ಮ ಹುಡುಗಿ ಸ್ವಲ್ಪ ದುಡುಕಿನ ಸ್ವಭಾವದವಳು..ಸಿಟ್ಟು ಮುಂದೆ ಯಾವಾಗಲು..ಮುದ್ದಿನಿಂದ ಬೆಳೆಸಿದ ಫಲವಿದು..ತಪ್ಪು ಮಾಡಿದ್ರೆ ದಯವಿಟ್ಟು ಕ್ಷಮಿಸಿ ಬಿಡಿ ..
ಆಗರ್ಭ ಶ್ರೀಮಂತ ಮಾವ ತನ್ನ ಮುಂದೆ ಕೈ ಜೋಡಿಸಿದ್ದನ್ನ ಕಂಡ ಕಿರಣ್ಗೆ ಕಸಿವಿಸಿ ಆಗಿ ..
ಮಾವ ..ನೀವು ದೊಡ್ಡವರು ...ಹೀಗ್ ಮಾಡ್ಬೇಡಿ ..ಏನಿದ್ದರೂ ಆಜ್ಞೆ ಮಾಡಿ ...ಆ ಅಧಿಕಾರ ನಿಮಗಿದೆ ..ನಿಮ್ಮ ಮಗ ಅಂತ ತಿಳಿದುಕೊಳ್ಳಿ ...ಹಾ ...ನಿಮ್ಮ ಮಗಳ ಚಿಂತೆ ಬಿಡಿ ..ನಾನ್ ಅವಳನ್ನ ಚೆನ್ನಾಗಿ ನೋಡ್ಕೋತೀನಿ ..ಅಂತ ಅವರ ಕೈ ಹಿಡಿದು ಒತ್ತಿ ಹೇಳಿದ್ದ.
ಹೋ ...ಸ್ನೇಹಿತರ ಗದ್ದಲ..
ನಡೆಯಿರಿ ಅಮ್ಮಾವ್ರೇ ...ನಾಟಕೀಯವಾಗಿ ನುಡಿದ ಅಪೇಕ್ಷಾಲಂಕಾದೆ ತಿರುಗಿ.
ಮೆತ್ತನೆಯಾ ಅಲಂಕಾರಿಕ ಕುರ್ಚಿಗಳ ಅಲಂಕರಿಸಿದರು ಎಲ್ಲರೂ.
ಸಮವಸ್ತ್ರ ಧರಿಸಿದ ಮಾಣಿಗಳು ಒಂದೊಂದಾಗಿಬಡಿಸತೊಡಗಿದರು ..
ಕಾಜು ಕಟ್ಲಿ ,ಬದಾಮ್ ಹಲ್ವಾ,ಜಿಲೇಬಿ,ಅಂಜೂರ್ ಬರ್ಫಿ..ಮೋತಿ ಚುರ್ ಲಡ್ಡು ..ಅಬ್ಬಬ್ಬಾ ..ಒಂದಕ್ಕಿಂತ ಒಂದು ರುಚಿ ..
ಆಮೇಲೆ ಬಂದವು ವಿವಿಧ ಪಲ್ಯಗಳು ...ತುಪ್ಪ ಸವರಿದ ತೆಳು ಪುಲ್ಕಗಳು ...ಒಂದರ ಮೇಲೆ ಒಂದು ಬಂದು ಬೆಳ್ಳಿ ತಟ್ಟೆ ಅಲಂಕರಿಸಿದವು..
ಹಣ್ಣಿನ ರಸಗಳು ..೧೦ ವೆರೈಟಿ ಐಸ್ ಕ್ರೀಮ್ಗಳು ...
ಮುಗಿಯಲಾರದ ಭಕ್ಷಗಳ ಸಾಲುಗಳು.ನವ ವಧುವಿಗೆ ಸಿಹಿ ತಿನಿಸಿದ ಕಿರಣ್...ಜೋರಾದ ನಗುಗದ್ದಲ ..ಅಪೇಕ್ಷಾ ಮಾತ್ರ ಯಾರು ಹೇಳಿದರೂ ಕಿರಣ್ ಬಾಯಿಗೆ ಸಿಹಿ ಹಾಕಲೇ ಇಲ್ಲ.
ಅದ ನೋಡಿ ನಕ್ಕು ಸುಮ್ಮನಾದ ಕಿರಣ್ ...ಅಮ್ಮನವರಿಗೆ ಯಾಕೋ ಕೋಪ ..ಮೆಲ್ಲನುಸಿರಿದ .ಅವನ ಉಸುರಿ ತಾಗಿ ಕಿವಿ ಬೆಚ್ಚಗಾಯಿತು ಇವಳಿಗೆ.
ಯಾರು ಏನು ಅಂದುಕೊಳ್ಳುವರೋ ಎನ್ನುವದ ವಿಚಾರ ಮಾಡದೇ ಊಟವನ್ನು ನಗು ನಗುತ್ತಾ ಸವಿಯುತಿದ್ದ ಕಿರಣ್ ...
ಅವನನ್ನ ನೋಡಿ ಅಸೂಯೆಯಾಯಿತು ...
ಊಟಕ್ಕೆ ಕುಳಿತಾಗಿನ ಹಸಿವು ಈಗಿಲ್ಲ...ತಳಮಳ ಮನದಲ್ಲಿ.
ಶುಕ್ರವಾರ ಮದುವೆಯಾಗಿದ್ದರಿಂದ ಸೊಸೆಯನ್ನ ಮನೆತುಂಬಿಸಿಕೊಳ್ಳುವ ಕಾರ್ಯಕ್ರಮದಲ್ಲಿ ಎಲ್ಲರೂ ಬ್ಯುಸಿಯಾಗಿದ್ದರು.
ಕೃಷ್ಣರಾಯರೂ ಇದಕ್ಕೆ ಸಮ್ಮತಿಸಿದ್ದರು ..
ಕಲ್ಯಾಣ ಮಂಟಪದ ಎದುರಲ್ಲಿ ಬೆಂಜ್ ಕಾರು ಹೂವುಗಳಿಂದ ಅಲಂಕರಿಸಿಕೊಂಡು ನವಮದುಮಕ್ಕಳ ದಾರಿ ಕಾಯುತಲಿತ್ತು.
ಅಪೇಕ್ಷಾಳನ್ನು ಹುಡುಕುತ್ತ ಅವಳಮ್ಮ, ಅವಳ ವಾರಗಿತ್ತಿಯರು ಬಂದರು...ನವ ದಂಪತಿಗಳ ಗೋಳು ಹೊಯ್ದುಕೊಳ್ಳುವದ ನೋಡಿ ನಸು ನಕ್ಕರು....
ಎಲ್ಲರನ್ನ ಕಣ್ಣ ತುಂಬಾ ತುಂಬಿಕೊಂಡಳು ಒಮ್ಮೆ.ಪ್ರೀತಿಯ ಅಪ್ಪನ ಎದೆಗೆ ಒರಗಿದಳು..ಕಣ್ಣೀರು ಉಕ್ಕಿ ಬಂದವು....ಅಪ್ಪ ನನ್ನ ಮನಸ್ಸನ್ನ ಅರ್ಥಮಾಡಿಕೊಳ್ಳಲಿಲ್ಲ ನೀವು...ಪುಸುಗುಟ್ಟಿತು ಮನಸ್ಸು..ಮಗಳ ತಲೆ ಸವರಿದರು ..ಚಿಂತೆ ಬೇಡ ..ನಿನಗೆ ಒಳ್ಳೆಯದನ್ನೇ ಮಾಡಿದ್ದೇನೆ ಎನ್ನುವಂತಿತ್ತು ಅವರ ಸ್ಪರ್ಶ..
ಮುದ್ದಿನ ಮಗಳು ...ಅಕ್ಕರೆ ತುಂಬಿ ಬಂತು..ಮಧ್ಯ ಬರುತ್ತಿದ್ದ ಕಣ್ಣೀರ ಮಗಳಿಗೆ ಕಾಣದಂತೆ ಒರೆಸಿಕೊಳ್ಳುತಿದ್ದರು.
ಅಪ್ಪ ಮಗಳ ನೋಡಿ ಅಪೇಕ್ಷಾಳ ತಾಯಿತಾನೆ ಮುಂದೆ ಬಂದು ಗಂಡನ ಸಮಾಧಾನ ಮಾಡಿ ಮುಂದಿನ ಕಾರ್ಯಕ್ಕೆ ಅನುವು ಮಾಡಿಕೊಟ್ಟರು.
ಅಜ್ಜಿ ಅಜ್ಜ ಚಿಕ್ಕಮ್ಮ ಚಿಕಪ್ಪ..ತಮ್ಮಂದಿರು ...ಸಾಲಾಗಿ ನಿಂತ ಬಳಗಕ್ಕೆಲ್ಲ ಅಪ್ಪಿಕೊಂಡಳು..ಇವಳೆಂದರೆ ಬಲು ಅಕ್ಕರೆ ಎಲ್ಲರಿಗೂ..ಚುಟಿ ಹುಡುಗಿ ..ಎಲ್ಲರನ್ನೂ ಹಚ್ಚಿಕೊಳ್ಳುವ ಹುಡುಗಿಯದು..ಎಲ್ಲರ ಕಣ್ಣಲ್ಲಿ ನೀರು ...
ನಡೀರಿ ..ಎಲ್ಲಾ ಸೇರಿ ಈ ಹುಡುಗಾಟದ ಹುಡುಗಿನ ಬಿಟ್ಟು ಬರೋಣ..
ಕೃಷ್ಣರಾಯರ ಅಪೇಕ್ಷಳ ಕಾಲು ಎಳೆದರು.
ಆ ಅಳುವಿನಲ್ಲಿ ನಕ್ಕರು ಎಲ್ಲರೂ.
ಹೊಸ ಮನೆ ಹೊಸಿಲಲ್ಲಿ ನಿಂತಿದ್ದಳು ನವ ವಧು.
ನೆಂಟರಿಷ್ಟರಿಂದ ತುಂಬಿತ್ತು ಮನೆ .
ಹೊಸಿಲ ಒಳಗೆ ಆರತಿ ಹಿಡಿದ ನೀರೆಯರು.ಗಂಡನ ಕಿರು ಬೆರಳು ಹಿಡಿದು ಮೆಲ್ಲನೆ ಒಲ್ಲದ ಮನಸ್ಸಿನಿಂದ ಗ್ರಹ ಪ್ರವೇಶ ಮಾಡಿದಳು ಅಪೇಕ್ಷಾ.
ಆರತಿ ಬೆಳಕಲ್ಲಿ ಸುಂದರಾವಾಗಿ ಕಂಡಳು .ಝರಿ ಅಂಚಿನ ಕೆಂಪು ಸೀರೆ...ಬಿಳಿ ಎಳೆ ಕೈಗೆ ಬಳೆಗಳ ಮಧ್ಯ ಬಂಗಾರದ ಬಳೆಗಳ ಸಾಲು, ರಂಗೇರಿದ ಮೆಹಂದಿ,ಏಳುಸಾದ ಬೆರಳುಗಳು ಕಾಣದಷ್ಟು ಉಂಗುರಗಳು ..ವಜ್ರದ ನೆಕ್ಲೆಸ್ ಜೊತೆಗೆ ಸ್ಪರ್ದಿಸುವ ಕರಿ ಮಣಿಯ ತಾಳಿ ಕೊರಳನ್ನು ಅಲಂಕರಿಸಿತ್ತು ...ನೋಡಿದರೇ ಮತ್ತೆ ನೋಡ ಬೇಕೆನಿಸುವ ಮುದ್ದು ಮುಖ..
ಅತ್ತೆ ನಿದಾನವಾಗಿ ಸೊಸೆ ಕೈ ಹಿಡಿದು ಬಾಮ್ಮ ಅಂತ ಮಮತೆಯಿಂದ ಕರೆದೊಯ್ದಳ್.ದೇವರ ಮನೆ ಮುಂದೆ ನಿಲ್ಲಿಸಿ ..ನಿನ್ನ ಕೈಯಾರೆ ತುಪ್ಪದ ದೀಪ ಬೆಳಗಮ್ಮ ..ನಿನ್ನಿಂದ ಈ ಮನೆ ನಂದಗೋಕುಲವಾಗಲಿ ...
ಅಕ್ಕರೆಯ ಮಾತು ಕೇಳಿ
ಅತ್ತೆ ನೀವು ತಿಳಿದಂತೆ ನಾನು ಇಲ್ಲ..ನಿಮ್ಮಿಷ್ಟದಂತೆ ಇಲ್ಲಿರಲು ನಾನು ಬಂದಿಲ್ಲ ..ನನ್ನಮೇಲೆಹೆಚ್ಚಿನ ಆಸೆ ಇಟ್ಟುಕೊಳ್ಳಬೇಡಿ ...
ಕೂಗಿ ಹೇಳಬೇಕೆನಿಸಿದರೂ ಗಂಟಲು ಒತ್ತಿದಂತಾಗಿ ಮಾತುಬಾರದೇ ಸುಮ್ಮನಾದಳು.
ಮುಂದುವರಿಯುವದು .....
Share your thoughts and read what others had to say
Did this story spark a memory or artistic inspiration? Share your thoughts below.
Be the first to share your thoughts on this story!