ಅಧ್ಯಾಯ ೩

ಶಾಂತವಾಗಿ ಬೆಳಗುವ ನಂದ ದೀಪ ನೋಡಿ ಮನಸ್ಸು ತಹ ಬದಿಗೆ ಬಂತು.
ಮೊಣಕಾಲೂರಿ ಕುಳಿತು ದೇವರ ವಿಗ್ರಹವನ್ನೆ ತದೇಕ ದೃಷ್ಟಿಯಿಂದ ನೋಡಿದಳು ..
ಏನಿದು ..ನಿನ್ನ ಆಟ ?..ಯಾರನ್ನೋ ತಂದು ಎಲ್ಲಿಯೋ ಸೇರಿಸುವೆ..ನನ್ನ ಮನದಲ್ಲಿ ಏನಿತ್ತು ನಿನಗೆ ಗೊತ್ತಿತ್ತು ..ಆದರೂ ಹೀಗೇಕೆ ಮಾಡಿದೆ ..

ಅಪೇಕ್ಷಾ ..ಏಳಮ್ಮ ..ನಿನ್ನ ರೂಮ್ ತೋರಿಸ್ತೀನಿ..ತುಂಬಾ ಸುಸ್ತಾಗಿದ್ದೀಯ ..ಸ್ವಲ್ಪ ರೆಸ್ಟ್ ಮಾಡುವಂತೆ ..
ಸರಿ ಅ..ತ್ತೆ .
ಅತ್ತೆ ಅನ್ನಲೂ ಬಿಗುಮಾನ ..
ಯಾವಾಗ ನನಗೆ ಈ ಬಂಧನದಿಂದ ಬಿಡುಗಡೆ .?
ಬಲು ಅಂದದ ರೂಮದು ..
ಮೆಲ್ಲನೆ ಹೆಜ್ಜೆ ಇಡುತ್ತ ಸುತ್ತಲೂ ನೋಡಿದಳು ..
ತಾರಸಿಯಿಂದ ಇಳಿ ಬಿಟ್ಟ ಝುಮ್ಮರ್ ಚಕ್ಕನೆ ಬೆಳಕು ಚೆಲ್ಲಿತು .ಕಿಟಕಿಗಳಿಗೆ ಇಳಿ ಬಿಟ್ಟ ತಿಳಿ ನೀಲಿ ಪರದೆಗಳು ಗಾಳಿಗೆ ಹಾರಾಡುತ್ತಿದ್ದವು .
ಎಲ್ಲಿಯೂ ನೆಲಕಾಣದಂತೆ ಬೂದು ಬಣ್ಣದ ಮೆತ್ತನೆಯ ಕಾರ್ಪೆಟ್ ನೆಲ ಅಲಂಕರಿಸಿದ್ದರು.
ರೂಮ್ ಮಧ್ಯ ದೊಡ್ಡದಾದ ಮಂಚ..ಎರಡಡಿ ಎತ್ತರದ ಮೆತ್ತನೆಯ ಹಾಸಿಗೆ ..ಕರ್ಟನ್ ಕಲರಿಗೆ ಮ್ಯಾಚಿಂಗ್ ಬೆಡ್ ಶೀಟ್ ..ಬಾತುಕೋಳಿ ಚಿತ್ರದ ತಲೆ ದಿಂಬುಗಳು ..
ಒಟ್ಟಿನಲ್ಲಿ ಬಹುಆಸಕ್ತಿಯಿಂದ ರೂಮ್ ಅಲಂಕರಿಸಿದ್ದರು ..
ಪರ್ವಾಗಿಲ್ಲ ...ಕಿರಣ್ ಗೂ ಒಳ್ಳೆ ಟೇಸ್ಟ್ ಇದೆ .
ಮೊದಲ ಬಾರಿ ಮುಖ ಕಿರಣ್ ನೆನೆದು ಮೆತ್ತಗಾಯಿತು .

ಮತ್ತೆ ಒಳಗಿನಿಂದ ಇನ್ನೊಂದು ಮನಸ್ಸು
ಏ ..
ಹುಷಾರ್ .ನೀನು ಇಲ್ಲಿರುವವಳಲ್ಲ ..ಮತ್ಯಾಕೆ ಈ ಬಂಧನದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿ ?..
ಯಾರು ಹೇಗೆ ಇರಲಿ ...ನಿಂಗೇನು ?
ಹೌದು ...ಆದಷ್ಟುಬೇಗ ಇಲ್ಲಿಂದ ಹೋಗಬೇಕು ..
ಇನ್ನು ಏನೋನೋ ವಿಚಾರಗಳು ತಲೆಯಲ್ಲಿ ..
ಅಪೇಕ್ಷಾ ..ಏನ್ ಹಾಗೆ ನಿಂತ್ಬಿಟ್ಟೆ ...ಸಂಕೋಚ ಬೇಡ ..ಬಾಮ್ಮ ಒಳಗೆ

ಪ್ರೀತಿ ತುಂಬಿದ ಧ್ವನಿಯಲ್ಲಿ ಕರೆದರು ಅತ್ತೆ ..
ನೀನು ನನ್ನ ಅಮ್ಮ ಅಂತ ಕರೀಬಹುದು ..
ನಸು ನಕ್ಕು ನುಡಿದರು
ಅಳೆದೆತ್ತರ ಅಲ್ಮೇರಾ ಮುಂದೆ ನಿಲ್ಲಿಸಿದರು ..
ಇದ್ರ ಒಳಗೆ ಸೀರೆಗಳಿವೆ ..ಕಿರಣ್ ಕಲೆಕ್ಷನ್ ...ನಿಂಗೆ ಇಷ್ಟವಾದ್ರೂ ಆಗಬಹುದು .ನೋಡು..

ಮಾತು ಮುಂದುವರಿದಿತ್ತು .

ಹಲೋ ..ಲೇಡೀಸ್ ..ನಾನ್ ಒಳಗೆ ಬರಬಹುದ ?

ಹೆಂಗಸರಿಬ್ಬರೂ ತಿರುಗಿ ನೋಡಿದರು.
ನಾಟಕೀಯ ಶೈಲಿಯಲ್ಲಿ ನಿಂತಿದ್ದ ಕಿರಣ್ ..
ಕಿಸ್ಸಕ್ಕನೆ ನಕ್ಕಳು ಅಪೇಕ್ಷಾ ..

ಸಾಕು ಬಾರೋ ..ನಾಟಕ ಮಾಡಿದ್ದು ..

ಪ್ರೀತಿಯಿಂದ ಗದರಿದರು .
ಒಳಗೆಹೆಜ್ಜೆ ಇಡುತ್ತ .

ಸೊಸೆ ಬಂದ ಮೇಲೆ .ಈ ಬಡ ಮಗನನ್ನ ಮರೆತೇಬಿಟ್ಟೆಯಲ್ಲ ಅಮ್ಮ...
ಏನೂ ಮರೆತಿಲ್ಲ ಬಿಡೋ ..ಕಳ್ಳ ನೀನು ..ನಮ್ಮ ಮಾತು ಕೇಳಿಸಿಕೊಳ್ಳುತಿದ್ದೀಯಾ?..

ಕಿವಿ ಹಿಂಡಿದರು.
.
ಅಯ್ಯೋ ..ಅಮ್ಮ ..ಏನಮ್ಮ ಇದು ?ಹೆಂಡ್ತಿ ಎದುರಿಗೆ ಮರ್ಯಾದೆ ತೆಗಿತಿದ್ದೀಯಲ್ಲ ?

ನಿಂಗೆ ಮರ್ಯಾದೆ ಬೇಕಾ ?ನೋಡಮ್ಮ ..ಅಪೇಕ್ಷಾ ..ಇವ್ನು ಚಿಕ್ಕಂದಿನಿಂದ ಹೀಗೆ ..ಬರೀ ನನ್ನ ಸತಾಯಿಸೋದು .ಈಗ ನಿನ್ ಬಂದಿದ್ದೀಯಾ ..ಚೆನ್ನಾಗಿ ವಿಚಾರಿಸಿಕೋ ...
ನಾ ಏನು ವಿಚಾರಿಸಿಕೊಳ್ಳಲಿ?...ನಾನು ಇಲ್ಲಿ ಇರಲಿಕ್ಕೆ ಬಂದಿಲ್ಲ ..

ಮನದಲ್ಲೇ ಅಂದುಕೊಂಡಳಾದ್ಲೂ ಮೇಲೆ ಸುಮ್ಮನೆ ನಕ್ಕಳು.

ನಡಿಯೋ ..ಮೊದ್ಲು ..ಹೊರ್ಗಡೆ ಎಲ್ಲ ಇದ್ದಾರೆ ..ಬೇಕಾದಷ್ಟು ಕೆಲಸಗಳಿವೆ ..ಅಪೇಕ್ಷಳನ್ನ ಕರೆದುಕೊಂಡು ಬಾ ..ನಾ ಹೋಗ್ತೀನಿ ...
ನೀ ಫ್ರೆಶ್ ಆಗಿ ಬಾಮ್ಮ ..
ಮುದ್ದಿನಿಂದ ಸೊಸೆಗೆ ಲಟಿಗೆ ಮುರಿದು ಮಗನ ಹಣೆಗೆ ಮುದ್ದಿಸಿ ಹೊರ ನಡೆದರು.

ಕೋಣೆಯಲ್ಲಿ ಇಬ್ಬರೇ ಆದುದರಿಂದ ಅಪೇಕ್ಷಾ ಳಿಗೆ ಕೊಂಚ ಸಂಕೋಚವಾಯಿತು.
ಅತ್ತೆಯ ಜೊತೆಗೇ ಹೋಗಿದ್ದಾರೆ ಚೆನ್ನಾಗಿತ್ತು ಅನಿಸಿತು ..
ಏನ್ ಅಮ್ಮಾವರು ...ಏನ್ ಚಿಂತೆ ಮಾಡ್ತಿದ್ದೀರಾ ?.ಫ್ರೆಶ್ ಆಗಿ ನೀವು ..ನಾನ್ ವೇಟ್ ಮಾಡ್ತೀನಿ ..

ಪಟ್ಟನೆ ಎದ್ದವಳು ಬಾತ್ರೂಮ್ ಕಡೆಗೆ ಹೊರಟಳು.

ತಣ್ಣನೆಯ ನೀರಿಂದ ಮುಖ ತೊಳೆದಳು ..ಹಾಯೆನಿಸಿತು ...
ಮುಖ ಕನ್ನಡಿಯಲ್ಲಿ ನೋಡಿಕೊಂಡಳು.
ಮದುಮಗಳ ಕಲೆ ಏರಿತ್ತು ..ಸುಂದರವಾಗಿ ಕಂಡಳು ತನ್ನಕಣ್ಣಿಗೇ ..
ಎದೆ ಮೇಲಿದ್ದ ಮಾಂಗಲ್ಯ ಭಾರವೆನಿಸಿತು...ಮನಸ್ಸಿಲ್ಲದೆ ಕಟ್ಟಿಸಿಕೊಂಡದ್ದು ..
ಎಲ್ಲ ಆಭರಣಗಳ ಜೊತೆ ಇದು ಒಂದು ..ನಾನ್ಯಾಕೆ ಇದನ್ನ ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿದ್ದೇನೆ ..
ತಲೆ ಕೊಡವಿ ಹೊರ ಬಂದಳು.
ಹೋಗೋಣ್ವಾ ?..
ಗಂಡನ ಮಾತಿಗೆ ತಲೆ ಆಡಿಸಿದಳು.

ಹೊರಗೆ ನೆಂಟರ ಗದ್ದಲ ..

ದೊಡ್ಡ ದೊಡ್ಡ ಸೋಫಾಗಳ ಮೇಲೆ ವಿರಾಜಮಾನರಾಗಿದ್ದರು..ಮಕ್ಕಳೊ ಅಲ್ಲಿ ಇಲ್ಲಿ ಗದ್ದಲ ಎಬ್ಬಿಸುತ್ತ ಓಡುತಿದ್ದವು.

ಹೊ ...ಬನ್ನಿ ಬನ್ನಿ ...ಯಂಗ್ ಕಪಲ್ ..

ಸೋಫಾದಲ್ಲಿ ಜಾಗ ಬಿಟ್ಟರು.

ಮುದ್ದು ಹೆಂಡತಿಯ ಕೈ ಹಿಡಿವ ಆಸೆ ಕಿರಣ್ಗೆ.
ಅವಳೋ ಬೇರೆಯದೇ ಲೋಕದಲ್ಲಿ ಇದ್ದಂತೆ ಕಂಡಿತವನಿಗೆ .
ಮನದಲ್ಲೇನೋ ಅನುಮಾನ ..ಇವ್ಳು ಯಾಕ್ ಹೀಗೆ?ಮದುವೆ ಆದಾಗಿನಿಂದ ನೋಡ್ತಿದೀನಿ ..ಒನ್ ಚೂರು ಖುಷಿ ಇಲ್ಲದವಳ ಹಾಗೆ ಅನಿಸಿತಿದ್ದಾಳೆ...ಈ ಮದ್ವೆ ಬೇಕಾಗಿರಲಿಲ್ಲವೋ ಹೇಗೆ ?...ಸ್ವಲ್ಪ ಅನುಮಾನದಲ್ಲಿ ಬಿದ್ದ.
ತಕ್ಷಣವೇ ಕೊಡವಿಕೊಂಡ ..ಛೆ ..ಛೆ ..ನಾನೆಂತವ ?..
ಪಾಪ !..ಹೊಸದಾಗಿ ಪರಿಚವಾದವರು ನಾವೆಲ್ಲಾ.ಸ್ವಲ್ಪ ಟೈಮ್ ಬೇಕಲ್ವಾ?..
ಹುಸಿ ನಗೆ ಬಂತು ತುಟಿಯ ಮೇಲೆ ..

ಏನ್ ಈ ಯಪ್ಪಾ ನಗುವುದು?..ನನ್ನ ನೋಡಿಯೇ ನಗುತ್ತಿರಬೇಕು.ನಗಲಿ ಬಿಡು ..ನಂಗೇನು?...ಏನ್ ಭಾರಿ ಜಾಣ..ನೋಡ್ತಾ ಇರ್ಲಿ..ಇವ್ರೆಲ್ಲ ಹೋದ ಮೇಲೆ ನನ್ ಕೈಗೆ ಸಿಗು ಮಾಡ್ತೀನಿ.ನಾನ್ ಯಾರು ಅಂತ ತೋರಿಸ್ತೀನಿ.
ಬಿಮ್ಮನೆ ಮನದಲ್ಲೇ ಅಂದುಕೊಂಡಳು ಅಪೇಕ್ಷ .

ಮುಂದಿನ ಕಾರ್ಯಕ್ರಮಕ್ಕೆ ಸಜ್ಜಾಗುತಿತ್ತು ಕಿರಣ್ ರೂಮ್.
ತರ ತರಹದ ಹೂವುಗಳನ್ನು ಎಲ್ಲಿಂದಲೋ ತರಿಸಿದ್ದರು..ಘಮ ಘಮಿಸುವ ಬಣ್ಣ ಬಣ್ಣದ ಹೂವುಗಳು.ತಾಜಾತನದಿಂದ ಕೂಡಿದ್ದವು.

ಪೂರ್ತಿ ಕೋಣೆಯೇ ಹೂವಿನ ತೋಟದಂತಿತ್ತು.
ಮೂಲೆಯಲ್ಲಿ ದೊಡ್ಡ ಟೇಬಲ್ ಮೇಲೆ ಸಿಹಿ ತಿಂಡಿಗಳ ಮೇಳ ..

ಕತ್ತು ತಗ್ಗಿಸಿ ಕುಳಿತವಳನ್ನ ಅತ್ತೆ ನಿಧಾನವಾಗಿ ಕರೆದೊಯ್ದರು ಕೋಣೆಯೊಳಗೆ ..
ಘಮ್ಮೆನ್ನುವ ಸೆಂಟಿನ ಪರಿಮಳ ಮತ್ತೇರಿಸುವಂತಿತ್ತು..ಒಂದು ಕ್ಷಣ ಅಪೇಕ್ಷಾಳಿಗೆ ತಲೆ ತಿರುಗಿದಂತಾಯಿತು.
ಮುಂದಿನದು ಊಹಿಸಿಕೊಂಡು ಇದರಿಂದ ಹೇಗೆ ತಪ್ಪಿಸಿಕೊಳ್ಳುವದು ಅಂತ ಲೆಕ್ಕ ಹಾಕತೊಡಗಿದಳು ..
ಇದ್ಯಾವದೂ ಗೊತ್ತಿಲ್ಲದ ಕಿರಣ್ ನಗುತ್ತಾ ಒಳಗೆ ಬಂದ ...ಎಲ್ಲರ ಕೀಟಲೆಗದ್ದಲ ನೋಡಿ ನಗುತ್ತ ಇನ್ನು ಸಾಕು ಹೋಗಿ ಎಲ್ಲ.

ಏನೋ ..ನಾವು ಎಷ್ಟು ಬೇಗ ಬೇಡ್ವ?ಹೆಂಡ್ತಿ ನೋಡಿ ನಮ್ಮನ್ನು ಮರೆತ್ಯಾ?

ಕಾಲೆಯುವ ಅವರನ್ನ ನಗುತ್ತ
ಅಮ್ಮಂದಿರಾ...ಮೊದ್ಲು ಜಾಗ ಖಾಲಿ ಮಾಡ್ತಿರೋ ಇಲ್ವೋ?..ಇಲ್ಲಾಂದ್ರೆ ಒಬ್ಬೊಬ್ಬರನ್ನ ಎತ್ತುಕೊಂಡು ಹೊರ ಹಾಕ್ತಿನಿ...
ಗಂಡನ ತುಂಟತನದ ಮಾತುಗಳು ಇಷ್ಟವಾಗುತಿದ್ದವು ಅಪೇಕ್ಷಾಳಿಗೆ.
ನಗು ಉಕ್ಕಿ ಬಂತು.

" ಅಧ್ಯಾಯ ೩ " - ಗೆ ರೇಟಿಂಗ್ ನೀಡಿ

Leave a Review

Share your thoughts and read what others had to say

Your Review

Did this story spark a memory or artistic inspiration? Share your thoughts below.

★ ★ ★ ★ ★
🌸

No reviews yet

Be the first to share your thoughts on this story!

Connect with Me