ಅಂತರಂಗದ ತೆರೆ ಸರಿದಾಗ
ಕಣ್ಣೀರ ಧಾರೆ ಅಪೇಕ್ಷಳ ಕಣ್ಣಲ್ಲಿ .ಪಕ್ಕದಲ್ಲೇ ಕುಳಿತಿದ್ದ ತನ್ನಿನಿಯನನ್ನು ನೋಡಲು ಇಷ್ಟವಿಲ್ಲ ಆಕೆಗೆ ..ಬಲವಂತದ ಮದುವೆಯದು ..ಗಟ್ಟಿಮೇಳ...ಗಟ್ಟಿಮೇಳ...ಪೂರೋಹಿತರ ಧ್ವನಿ.ಪಕ್ಕದಲ್ಲಿದ್ದ ಕಿರಣ್ ಕೈಗೆ ತಾಳಿ ಬಂತು...ಬೇಗ ಕಟ್ಟಪ್ಪ ..ಧ್ವನಿಯೊಂದು …
Read More →ಒಂದು ಸಂಸಾರ. ಗಂಡ,ಹೆಂಡತಿ ,ಒಂದು ಪುಟ್ಟ ಮಗು..ಹೊರಗಿಂದ ನೋಡಲೇನೋ ಅತ್ತುತ್ತಮ, ಸುಂದರ ಸಂಸಾರ.ಒಳಗೆ ಮಾತ್ರ ಗುದ್ದಾಟ..
ಅದೂ ಸರಳಾಳಿಂದ.
ಹೆಸರೇನೋ ಸರಳ. ಆದರೆ ಆಕೆ ಯಾವ ರೀತಿಯಿಂದಲೂ ಸರಳವಾಗಿಲ್ಲ .ಆಡಂಬರದ,ಡೌಲಿನ ಜೀವನದ ಕನಸು ಹೊತ್ತವಳು.ಗಂಡನೇನೋ ಇವಳು ಹೇಳಿದ ಹಾಗೆ ಕುಣಿಯುವವನು ಸಿಕ್ಕ. ಆದರೆ ಇವಳ ಮುಗಿಯದ, ತೀರದ, ಆಡಂಬರದ ಜೀವನ ಕೊಡುವವನಲ್ಲ.ತಾನಾಯಿತು ತನ್ನ ಕೆಲಸವಾಯಿತು ,ಜೀವನವಾಯಿತು ಅನ್ನೋ ಜೀವವದು.ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವ ತತ್ವದವನು.ಈ ಅಬ್ಬರದ, ಜೊಳ್ಳು,ಟೊಳ್ಳು ಆಡಂಬರ ನಮಗೇಕೆ? ಎನ್ನುತಿದ್ದ ಹೆಂಡತಿಗೆ.ಆದರೆ ಅದು ಆಕೆಯ ಕಿವಿಗೆ ಬಿದ್ದಂತೆ ಕಾಣುತ್ತಿರಲಿಲ್ಲ.ಸರಳಾಳಿಗೆ ತನ್ನದೇ ಆದ ಹಠ. ಬುದ್ದಿ ಹೇಳಿ ಹೇಳಿ ಹೆತ್ತವರೂ ಸೋತು ಕೈ ಬಿಟ್ಟಿದ್ದರು. ಅಂತ ಒಳ್ಳೆ ಅಳಿಯ ಸಿಕ್ಕಿದ್ದಾನೆ ಅದನ್ನು ಬಿಟ್ಟು , ಈಕೆ ತನ್ನ ಹಠ ಸಾದಿಸುವುದ ಕಂಡು ಬೇಸರಿಸಿದ್ದಿದೆ.
ಸರಳಾಳ ಅತ್ತೆ ಸಾಕಮ್ಮ ಅಂತೂ ಸಾದು ಪ್ರಾಣಿ. ಮಗ, ಸೊಸೆ, ಎಂದರೆ ಪ್ರಾಣ.ಗಂಡನನ್ನು ಕಳೆದುಕೊಂಡ ಮೇಲೆ ಇದೊಬ್ಬ ಮಗನ ಜೊತೆಯಲ್ಲೇ ಇದ್ದು, ಸೊಸೆಗೆ ಹೊಂದಿಕೊಂಡು ಹೋಗುವಂಥ ದೊಡ್ಡ ಮನಸ್ಸಿನ ಹೆಣ್ಣುಮಗಳು.
ಸೊಸೆಯ ವಿಚಾರಗಳೆಲ್ಲ ಗೊತ್ತು ಆಕೆಗೆ.ಒಮ್ಮೊಮ್ಮೆ ಮಗನ ಸ್ಥಿತಿಗೆ ಮರುಗುತಿತ್ತು ತಾಯಿ ಜೀವ. ಬಂಗಾರದಂಥ ಮಗನಿಗೆ ಅತೀ ಆಸೆಯ ಸೊಸೆ ಸರಿಯಾದ ಜೋಡಿ ಅಲ್ಲ ಅಂತ ಅನ್ನಿಸುವುದು.ಆದರೇನು ಮಾಡುವುದು ?ಗಂಡನ ಆತ್ಮ ಸ್ನೇಹಿತನ ಪುತ್ರಿ ಅಂತ ನೆಂಟಸ್ಥನ ಬೆಳೆಸಿದ್ದರು.ಈಗ ಗೆಳೆಯರು ಮುಂದೆ ಬೀಗರು ಅಂತ ಗಂಡ, ಸರಳಾಳ ತಂದೆ ಬಿಗಿಯಾಗಿ ಕೈ ಹಿಡಿಕೊಂಡು, ಹೆಮ್ಮೆಯಿಂದ ಹೋಗುತ್ತಿದ್ದುದ ಕಣ್ಣಾರೆ ಕಂಡವಳು ತಾನು. ಆದರೆ ಆಗಲಿ ತಪ್ಪೇನು?ಅಂತ ತಾನು ಸಮ್ಮತಿಸಿದ್ದ ನೆನಪಿಸಿಕೊಂಡು ಸುಮ್ಮನಾಗುತಿದ್ದಳು.ಹಾಗೆ ನೋಡಿದರೆ ಸರಳ ಮೊದ ಮೊದಲು ಚೆನ್ನಾಗಿಯೇ ಇದ್ದಳು .
ಗಂಡನನ್ನು, ತನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು .ಬರ ಬರುತ್ತಾ ಬದಲಾಗತೊಡಗಿದಳು...ಯಾಕೆ ಎನ್ನುವ ವಿಷಯ ತಿಳಿದಿದ್ದು ಆಮೇಲೆ.
ಪಕ್ಕದ ಮನೆಗೆ ಯಾರೋ ಹೊಸ ಸಂಸಾರ ಬರುವುದು ಎಂದಾಗ ಎಲ್ಲರಿಗೂ ಖುಷಿಯಾಗಿ ಹೋಗಿತ್ತು. ಕಾರಣ ಅವರಿಗೂ ಒಂದು ಪುಟ್ಟ ಮಗುವಿದೆ ಎಂದೂ ಅದರ ವಯಸ್ಸು ಹೆಚ್ಚು ಕಡಿಮೆ ನಮ್ಮ ಪಾಪುವಿನ ವಯಸ್ಸೆಂದು ಗೊತ್ತಾಗಿತ್ತು.ಇವರು ಇದ್ದುದ್ದು ಹೊಸ ಏರಿಯಾ ಆದುದರಿಂದ ಅಲ್ಲೊಂದು ಇಲ್ಲೊಂದು ಮನೆಗಳು. ಜೊತೆಗೆ ಆಡುವವರಿಲ್ಲದೇ ಪಾಪು ಕಿರಿ ಕಿರಿ ಮಾಡುತಿತ್ತು. ಬರುವವರ ಮಗು ನಮ್ಮ
ಪಾಪುಗೆ ಸರಿಯಾದ ಜೊತೆಯಾಯಿತು ಅಂತ ನಾವೆಲ್ಲಾ ಅಂದುಕೊಂಡಿದ್ದೆವು. ಆದರೆ ಆಗಿದ್ದೇನು?
ಉಸ್ಸೆನ್ನುತ್ತ ಮಲಗಿದ್ದಲ್ಲೇ ಮಗ್ಗುಲು ಬದಲಿಸಿದರು ಸಾಕಮ್ಮ. ಹಾಗೆಯೇ ನಿದ್ರೆಗೆ ಜಾರಿದ್ದವರಿಗೆ ಏನೋ ಸದ್ದಾದಾಗ ಎದ್ದು ಹೊರ ಇಣುಕಿದರು.
ಪಕ್ಕದ ಮನೆ ಮುಂದೆ ದೊಡ್ಡ ಲಾರಿ ಬಂದು ನಿಂತಾಗ ಕುತೂಹಲದಿಂದ ಕಿಟಕಿಯಲ್ಲಿ ಇಣುಕಿ ನೋಡಿದ್ದರು. ಲಾರಿ ತುಂಬಿ ಉಕ್ಕಿ ಹರಿಯುವಷ್ಟು ಸಾಮಾನುಗಳು, ಹಿಂದೆ ದೊಡ್ಡ ಕಾರು.ಕಾರಿಂದ ಯಾರು ಇಳಿಯುವರೋ ನೋಡೋಣ ಅಂತ ಕಿಟಕಿಗೆ ಅನಿಸಿಕೊಂಡು ನಿಂತರು.
ಕಾರಿಂದ ಮೊದಲು ಇಳಿದಿದ್ದು ಒಬ್ಬ ಮನುಷ್ಯ, ಬಹುಷಃ ಮನೆ ಯಜಮಾನ ಇರಬೇಕು ಅಂತ ಅನಿಸಿತವರಿಗೆ.ಆ ಗತ್ತು, ಆ ಗಾಂಭೀರ್ಯ ಹಾಗಿತ್ತು. ಒಳ್ಳೆ ಸಫಾರಿ ಸೂಟಲ್ಲಿ ಇದ್ದರು.ಬೆರಳ ತುಂಬಾ ಉಂಗುರಗಳು ಬಿಸಿಲಿಗೆ ಪಳಕ್ಕನೆ ಹೊಳೆದವು. ಅಬ್ಬಾ..! ಶ್ರೀಮಂತರೇ ಇರಬೇಕು ಅಂತ ಅಂದುಕೊಂಡರು ಸಾಕಮ್ಮ.
ಮುಂದುವರೆಯುವುದು ......
ಚಿತ್ರ ಕೃಪೆ, ಗೂಗಲ್
Share your thoughts and read what others had to say
Did this story spark a memory or artistic inspiration? Share your thoughts below.
Be the first to share your thoughts on this story!