ಅಂತರಂಗದ ತೆರೆ ಸರಿದಾಗ
ಕಣ್ಣೀರ ಧಾರೆ ಅಪೇಕ್ಷಳ ಕಣ್ಣಲ್ಲಿ .ಪಕ್ಕದಲ್ಲೇ ಕುಳಿತಿದ್ದ ತನ್ನಿನಿಯನನ್ನು ನೋಡಲು ಇಷ್ಟವಿಲ್ಲ ಆಕೆಗೆ ..ಬಲವಂತದ ಮದುವೆಯದು ..ಗಟ್ಟಿಮೇಳ...ಗಟ್ಟಿಮೇಳ...ಪೂರೋಹಿತರ ಧ್ವನಿ.ಪಕ್ಕದಲ್ಲಿದ್ದ ಕಿರಣ್ ಕೈಗೆ ತಾಳಿ ಬಂತು...ಬೇಗ ಕಟ್ಟಪ್ಪ ..ಧ್ವನಿಯೊಂದು …
Read More →ಪಕ್ಕದ ಮನೆ ಮುಂದೆ ಲಾರಿ ನಿಂತಾಗ ಕುತೂಹಲದಿಂದ ಸಾಕಮ್ಮ ನೋಡಿದರು
ಮುಂದೆ,
ಭಾಗ ೨ ..
ಆ ಮನುಷ್ಯನ ಹಿಂದೆಯೇ ಇಳಿದಳು ಹೆಂಗಸೊಬ್ಬಳು.ಸರಿಯಾಗಿ ನೋಡಿದರು ಆಕೆಯನ್ನು ಸಾಕಮ್ಮ..ಹೆಚ್ಚು ಕಡಿಮೆ ತನ್ನ ಸೊಸೆಯ ವಯಸ್ಸೇ!..ಆದರೆ ಆಕೆ ಉಟ್ಟಿದ್ದ ಸೀರೆ, ತೊಟ್ಟ ಆಭರಣಗಳು ಆಕೆ ಬಹು ದೊಡ್ಡ ಶ್ರೀಮಂತೆ ಅಂತ ಸಾರಿ ಹೇಳುತಿದ್ದವು .ಆಕೆಯ ಕೈ ಹಿಡಿದು ಇಳಿಯಿತು ಪುಟ್ಟ ಪಾಪು....ಕೊಡಿನಂತೆ ಎರಡು ಜುಟ್ಟು ಕಟ್ಟಿಕೊಂಡು ಕೈಯಲ್ಲೊಂದು ಲಾಲಿಪಾಪು ಹಿಡಿಕೊಂಡು, ನಗುತ್ತ ಒಳ ಹೊರಟಿತು. ಮುದ್ದಾದ ಮಗು ಅಂತ ಅಂದುಕೊಂಡರು ಸಾಕಮ್ಮ. ಅದರ ಬಟ್ಟೆ, ಕೈಯಲ್ಲೊಂದು ಪುಟ್ಟ ಬಳೆ ,ಕಾಲಲ್ಲಿ ಹಾಕಿದ ದುಬಾರಿ ಶೂ ನೋಡಿ ಸಾಕಮ್ಮ ತುಂಬಾ ಶ್ರೀಮಂತರಿವರು ಅಂತ ಅಂದುಕೊಂಡರು.
ಗಂಡ, ಹೆಂಡತಿ, ಮಗು ನಗುತ್ತ ಮನೆ ಹೊಕ್ಕರು.
ಹಿಂದೆಯೇ ಕೂಲಿಯವರು ಲಾರಿಯಿಂದ ಸಾಮಾನುಗಳನ್ನು ಇಳಿಸತೊಡಗಿದರು.ಇನ್ನು ತಮಗೇನು ಕೆಲಸ ಅಂತ ಸಾಕಮ್ಮ ಕಿಟಕಿಯಿಂದ ಒಳ ಸರಿದು ತಮ್ಮ ಕೆಲಸಕ್ಕೆ ಗಮನ ಕೊಟ್ಟರು.
ಹೇಗಿದ್ದರೂ ಪಕ್ಕದ ಮನೆಯವರಾಗಿದ್ದಾರೆ ಮುಂದೆ ಪರಿಚಯವಾಗೇ ಆಗುತ್ತೆ ಅಂತ ಮನದಲ್ಲಿ ಅಂದುಕೊಂಡರು.
ರಾತ್ರಿ ಮಗ ಮನೆಗೆ ಬಂದಾಗ ಹೊಸ ಸುದ್ದಿಯ ತಂದಿದ್ದ. ಅವರದೇನೋ ದೊಡ್ಡ ವ್ಯವಹಾರವಿದೆಯಂತೆ ..ನಿತ್ಯ ಲಕ್ಷಾನುಗಟ್ಟಲೆ ದುಡ್ಡಿನ ವ್ಯಾಪಾರವಂತೆ ...ಕೆಲಸ ಮುಗಿಸಿ ಬರುವಾಗ, ಹಾಗೆ ಅವರನ್ನು ಭೇಟಿ ಮಾಡಿ ಬಂದಿದ್ದ.
ತಾವಿಬ್ವರು ಅದನ್ನು ಅಷ್ಟಾಗಿ ತಲೆಗೆ ತೆಗೆದುಕೊಳ್ಳದಿದ್ದರೆ ,ಸರಳಾ ಮಾತ್ರ ತುಂಬಾ ಮುತ್ತುವರ್ಜಿ ವಹಿಸಿ, ಗಂಡನಿಂದ ಅವರ ವಿಷಯ ಸಂಗ್ರಹ ಮಾಡಿದ್ದಳು.
ಅವಳು ಇನ್ನೂ ಕೆದಕುತ್ತಿದ್ದರೆ ಬೇಸತ್ತ ಗಂಡ,
ಇಲ್ಲೇ ಇರುತ್ತಾರೆ ಕಣೆ ಇನ್ನು ಅವರು, ನೀನೇ ಹೋಗಿ ಭೆಟ್ಟಿಯಾಗಿ ಏನು ಬೇಕೋ ಎಲ್ಲ ತಿಳಿದುಕೊಂಡು ಬಾ ಅಂತ ಹೊದಿಕೆ ಎಳೆದುಕೊಂಡಿದ್ದ .
ಸರಿ ಬಿಡಿ..ನಿಮಗೇಕೆ ತೊಂದರೆ? ನಾಳೆ ನಾನು ಅವರ ಮನೆಗೆ ಹೋಗಿ ಎಲ್ಲ ತಿಳಿದುಕೊಂಡು ಬರುತ್ತೇನೆ ಅಂತ ಸರಳ ತಾನೂ ಹೊದಿಕೆ ಎಳೆದುಕೊಂಡು ಮಲಗಿದಳು.
ಮುಂದಿನ ಆಗು ಹೋಗುಗಳು , ದೊಡ್ಡ ಚಂಡಮಾರುತ ತಮ್ಮಲ್ಲೆರ ನೆಮ್ಮದಿಯ ಬದುಕಲ್ಲಿ ಬರುವದೆಂದು ಯಾರಿಗೂ ತಿಳಿಯಲಿಲ್ಲ .
ನಿತ್ಯವೂ ಚಟುವಟಿಕೆಯ ದಿನಗಳಾಗಿದ್ದವು ಪಕ್ಕದ ಮನೆಯಲ್ಲಿ. ದೊಡ್ಡ ಟಿ.ವಿ. ಬಂತು. ಹಿಂದೆಯೇ ಏರ್ ಕಂಡೀಷನರ್, ದೊಡ್ಡ ದೊಡ್ಡ ಸೋಫಾಗಳು....ಹೀಗೆ ನಿತ್ಯ ಹೊಸ ಸಾಮಾನುಗಳು. ಮನೆ ಮುಂದೆ ಯಾವುದೋ ವಾಹನ ನಿಂತಾಗ ಪುಟ್ಟ ಮಗುವಿನಂತೆ ಓಡಿ ಬರುತ್ತಿದ್ದಳು ಸರಳ, ಬೆರಗು ಗಣ್ಣಿಂದ ಆ ಸಾಮಾನುಗಳೆಲ್ಲ ಅವರ ಮನೆ ಒಳಗೆ ಹೋಗುವದ ನಿಂತು ನೋಡಿ, ನಿಟ್ಟುಸಿರು ಬಿಡುತ್ತ ಒಳ ಬರುತ್ತಿದ್ದಳು.ಒಂದೇ ಎರಡೇ.....!ಸಾಮಾನುಗಳ ಸುರಿಮಳೆ ಆಗುವುದ ನೋಡೇ ನೋಡಿದಳು.
ಅವರ ಮನೆಗೆ ಹೋಗಿ ಒಮ್ಮೆ ಎಲ್ಲ ನೋಡಿ ಬರಬೇಕು. ಬಂದು ಇವರಿಗೂ ಕೊಂಚ ತಿಳಿಹೇಳಿ ನಾವೂ ಅವರಂತೆ ಆಗಬೇಕು ಅಂತ ಹಠ ಮಾಡಿದರೆ ಸಾಕು ಕೇಳುತ್ತಾರೆ...ನಮ್ಮದೂ ಒಂದು ಸಂಸಾರವೇ..? ಹಳೆ ಓಬಿರಾಯನ ಕಾಲದ ಸೋಫಾ ಸೆಟ್ಟುಗಳು , ಹಳೆ ಟಿ. ವಿ.ಗಡ ಗಡ ಎನ್ನುತ್ತಾ ಸದ್ದು ಮಾಡುತ್ತಾ ತಿರುಗುವ ಫ್ಯಾನ್,...ಅಬ್ಬಾ ಒಂದೇ ಎರಡೇ...ಎಲ್ಲ ಮಾವನವರ ಕಾಲದವು..ಮದುವೆ ಆದಾಗಿನಿಂದ ಹೊಸ ಸಾಮಾನುಗಳು ಅಂತ ಒಂದೂ ತಂದಿಲ್ಲ ತಾವು. ಕೇಳಿದರೆ ಅಯ್ಯೋ ಸರಳ ನೀನೇ ನೋಡ್ತಿದೀಯಲ್ಲ, ಸಂಬಳ ಸಾಲುತ್ತಿಲ್ಲ ಅಂತ ಹೇಳೋ ಗಂಡನ್ನ ನೆನೆಸಿಕೊಂಡು ಕೋಪ ಬಂತು ಹೇಗಾದರೂ ಮಾಡಿ ಇವರನ್ನು ಸರಿ ಮಾಡಲೇ ಬೇಕು.
ಪಣ ತೊಟ್ಟೇ ಬಿಟ್ಟಳು.
ಮರುದಿನ,
ಪಕ್ಕದ ಮನೆಗೆ ಬರೀ ಕೈಯಿಂದ ಹೋದರೇನು ಚೆನ್ನ ಅಂತ ಜಾಮೂನು ತಯಾರಿಸಿಕೊಂಡು ಒಂದು ಚಿಕ್ಕ ಡಬ್ಬದಲ್ಲಿ ಹಾಕಿ, ಇದ್ದುದರಲ್ಲೇ ಒಂದು ಒಳ್ಳೆ ಸೀರೆ ಉಟ್ಟುಕೊಂಡು, ಹೊರ ಬಿದ್ದಳು ಸರಳಾ.
ದೊಡ್ಡ ಬಾಗಿಲಿಗೆ ಕಟ್ಟಿದ್ದ ನಾಯಿ ಜೋರಾಗಿ ಬೊಗಳಿದಾಗ ಬೆಚ್ಚಿ ಹಿಂದೆ ಸರಿದಳು.ನಾಯಿ ಬೊಗಳುವಿಕೆ ಕೇಳಿದ ಮನೆಯಾಕೆ ಮೆಲ್ಲನೆ ಹೊರಗೆ ಇಣುಕಿ, ಸರಳಾಳನ್ನು ಯಾರು ನೀವು ಎನ್ನುವಂತೆ ನೋಡಿದಳು.ನೋಟದಲ್ಲೇ ಸರಳಾಳ ಉಡುಪು , ಚಿಕ್ಕ ಕಿವಿ ಓಲೆ, ತೆಳ್ಳಗಾದ, ಸೊಟ್ಟಾದ ಬಳೆಗಳನ್ನು, ನೋಡಿಯಾಗಿತ್ತು. ಬಲು ಚುರುಕಿನ ಹೆಣ್ಣು ಮಗಳವಳು.ಒಂದೇ ಕ್ಶಣದಲ್ಲಿ ಈಕೆಯ ಸ್ಥಿತಿಯನ್ನು ಊಹಿಸಿಬಿಟ್ಟಳು.ಕೈಯಲ್ಲೊಂದು ಡಬ್ಬ ಹಿಡಿದ ಸರಳಾ ಮನೆಯಾಕೆಯ ಅನುಮತಿಗೋಸ್ಕರ ಬಾಗಿಲಲ್ಲೇ ನಿಂತು ಬಿಟ್ಟಿದ್ದಳು...ತಕ್ಷಣವೇ ನೆರೆಮನೆಯಾಕೆ ಇಲ್ಲದ ನಗುವನ್ನು ತುಟಿಗೆ ಲೇಪಿಸಿ,
ನೀವು..?
ಎನ್ನಲು,
ನಿಮ್ಮ ಪಕ್ಕದ ಮನೆಯಲ್ಲಿದ್ದೇವೆ ಎಂದಳು ಸರಳಾ.
ಓಹ್....!
ಬನ್ನಿ...ಬನ್ನಿ...
ಎನ್ನುತ್ತಾ ಬೊಗಳುವ ನಾಯಿಯನ್ನು ಕೆಲಸದವನ ಕರೆದು, ಒಳಗೆ ಕರೆದುಕೊಂಡು ಹೋಗಲು ಹೇಳಿದಳು.
ನನ್ನ ಹೆಸರು ಸರಳಾ.
ಓಹ್ ..ಸುಂದರವಾಗಿದೆ.ನನ್ನ ಹೆಸರು ಮಹಾಲಕ್ಷ್ಮಿ .
ಮುಂದುವರೆಯುವುದು .......
Share your thoughts and read what others had to say
Did this story spark a memory or artistic inspiration? Share your thoughts below.
Be the first to share your thoughts on this story!