ಗುಂಡ ಗುಂಡಿಯ ಹಾಸ್ಯ ಪ್ರಸಂಗಗಳು

ದಿನ  ಬೆಳಗಾದರೆ ಲಟ ಪಟ ಅಂತ ಓಡಾಡೋ  ಗುಂಡಿ ಸಪ್ಪಗೆ ಮೂಲೆ  ಹಿಡಿದ್ದಿದ್ದ ಗುಂಡಾ ನೋಡಿ ,ಆಶ್ಚರ್ಯ ಪಟ್ಟ.ಹೀಗೆಲ್ಲ ಸುಮ್ಮನೆ ಕುಳಿತವಳೇ ಅಲ್ಲ ...ಇಲ್ಲದ  ಸಲ್ಲದ  ಗದ್ದಲ ಮಾಡುತ್ತಾ,...ನನ್ನ ಬೈಯುತ್ತಾ ಬಿಮ್ಮನೆ ತಿರುಗುತ್ತಿದ್ದವಳು .....ಈಗ ....ಹೀಗೆ ...ಅರ್ಥವೇ  ಆಗದೇ ತಲೆ ಕರೆದುಕೊಂಡ .ಮುಂದೇನೂ ...ನಾನೇ ಮಾತಾಡಿಸಲೇ ....ಹೂಂ ...ಹೂ ...ಧೈರ್ಯ ಸಾಲುತ್ತಿಲ್ಲ ....ಹಾಗೇ ..ಸುಮ್ಮನೆ    ಇರುವಂತೆಯೂ  ಇಲ್ಲ ...ತಲೆ ಕೆಟ್ಟ ಗುಂಡಿ ಏನು ಮಾಡುವಳೋ  ಗೋತ್ತಿಲ್ಲ....
ಏನು ವಿಷಯ ಕೇಳಿ  ತಿಳಿದುಕೊಳ್ಳೋಣ ...ಪರಿಹಾರ  ಅವಳೆ  ಹುಡುಕಿಕೊಳ್ಳುತ್ತಳೆ ....ಅಂತ ತನಗೆ  ತಾನೇ ಸಮಾಧಾನ ಮಾಡಿಕೊಂಡು ,ಗುಂಡಿಯ  ಕಡೆ  ತಿರುಗಿದ.
"ಆಲ್ವೇ....ಏನಾಗಿದೆ ಅಂತ ನಿನ್ನ ಮುಖ  ಹೀಗೆ ಊದಿದೆ...?..ಏನಾಯಿತು ?...ಮೆಲ್ಲನೆ ಹೆದರಿ ಹೆದರಿ  ಕೇಳಿದ .
ಅಷ್ಟೇ....ಪಕ್ಕದಲ್ಲೇ ದಬಾರನೆ ಬಾಂಬ ಬಿದ್ದ ಸಪ್ಪಳ ."ರೀ ....ನಮ್ಮ  ಕೆಲಸದಾಕೆ  ನಂಜಮ್ಮ  ಹೋದ್ಲು ....ಊ..ಊ..."..ಅರ್ಧ ಅಳುತ್ತ ಗುಂಡಿ ಗುಡುಗಿದಳು.
"ಅಯ್ಯೋ ...ಪಾಪ ..ಚಿಕ್ಕ ವಯಸ್ಸು ...ಛೂ ..ಛೂ .."ಅಂತ ಗುಂಡ ಲೊಚಗುಟ್ಟಿದ.
"ಅಯ್ಯೋ ...ಹಾಗಲ್ಲ ...ಅವಳು ಊರು  ಬಿಟ್ಟು ಹೋದ್ಲು ..."..ಅಂತ ಗುಂಡನ ತಿವಿಯುವಂತೆ ಗುರಾಯಿಸಿದಳು ಗುಂಡಿ ..
"ಹೀ ...ಹೀ ....ಹೌದಾ?..ನಾನೆಲ್ಲೋ ಬೇರೆ ತಿಳಿದಿದ್ದೆ ..ಹೋಗಲಿ  ಬಿಡು ...ನೀನ್ಯಾಕೆ ಚಿಂತೆ ಮಾಡಿ  ಸೊರಗುತ್ತಿ "ಅಂತ ಮೆಲ್ಲನೆ ಪೂಸಿ ಹೊಡೆದ ಗುಂಡ.ಗಂಡನಿಗಿಲ್ಲದ ಮರ್ಯಾದೆ ಅವ್ಳಿಗೇಕೆ ಅಂತ   ಮತ್ಸರ ಒಳಗೊಳಗೆ .
"ನನ್ನ ಕಷ್ಟ   ನಿಮಗೇನ್ ಗೊತ್ತು?..ಒಂದು ಸಮಯ ನೀವಿಲ್ಲದಿದ್ದರೆ ನಡೆದೀತು .....ಆದರೇ ನಂಜಮ್ಮ ಇಲ್ಲದೇ ....ನಾನ್ ...."ಮುಂದೆ  ಮಾತು ಬಾರದೇ  ನಿಲ್ಲಿಸಿದಳು.
ಅರೇ ..ಇವನ..ಎಲ್ಲಿ ಬಂತಪ್ಪ ನನ್ನ ಸ್ಥಿತಿ...".ಆಯ್ಯೋ ಗುಂಡ ..ಆ ಕೆಲಸದಾಳಿಗಿಂತ  ಕಡೆಯಾದೆಯಲ್ಲೊ .."ತನಗೆ ತಾನೇ ಮರುಕ ಪಟ್ಟ.
ಇದ್ದ ಬಿದ್ದ ಧೈರ್ಯ ಸೇರಿಸಿ .."ಲೇ ..ಇಷ್ಟೇನಾ ?...ನಾ ಏನೋ  ದೊಡ್ಡದು  ಆಯಿತು  ಅನ್ಕೊಂಡೆ."
"ನಿಮಗೇನ್ರೀ ಗಂಡಸರು ...ಹೆಂಗಸರ ಕಷ್ಟ ಅರ್ಥವಾಗೋದೇ ಇಲ್ಲ ..."ಅಂತ ಗುಂಡನ ಕಡೆ ಕಳ್ಳ  ದೃಷ್ಟಿ ಬೀರಿದಳು .
ಎದ್ಯಾವದೂ ತಿಳಿಯದ ಗುಂಡ ಗಾಡವಾದ   ಚಿಂತನೆಯಲ್ಲಿದ್ದ .
"ರೀ ...ಮೆಲ್ಲನೆ ಗುಂಡಿ ರಾಗ ಎಳೆದಳು.
ಮುನ್ಸೂಚನೆ ಇಲ್ಲದೆ ಬರುವ ಚಂಡಮಾರುತದಂತೆ ತೋರಿತು ಗುಂಡನಿಗೆ ..ಏನು ಕಾದಿದೆಯೋ ...ಹೇಳಲಾರ ...ಕೇಳಲಾರ ...
ಮತ್ತೆ ರೀ ...
ಹೇಳೇ ...
ಮತ್ತೆ .".ನೀವು..ಇವತ್ತು ಯಾಕೆ ಮನೆಯಲ್ಲಿ  ಇದ್ದು ,ಹೆಲ್ಪ್ ಮಾಡಬಾರದು ?"
ವಿನಂತಿ ಕಾಣಲಿಲ್ಲ ಗುಂಡನಿಗೆ ..ಮಾಡಲೇಬೇಕು ಅನ್ನೋ  ಒತ್ತಡ ಕಾಣಿಸಿತು.
ಸರಿ ..ತಲೆಯಾಡಿಸಿದ.
ಹಿಗ್ಗಿನಿಂದ  ಗುಂಡಿ ಪಾತ್ರಗಳ ರಾಶಿ ,ಬಟ್ಟೆ ರಾಶಿ ಮುಂದೆ ನಿಲ್ಲಿಸಿದಳು.
ಮಾತಿಲ್ಲದೆ ಗುಂಡ  ಕಾಣದ ದೇವಗೆ ಹೀಗೆ ಕೈ ಬಿಟ್ಟರೆ ಹೇಗೆ  ಅಂತ ದುಃಖ ತೋಡಿಕೊಂಡ.
😊😊😊

Leave a Review

Share your thoughts and read what others had to say

Your Review

Did this story spark a memory or artistic inspiration? Share your thoughts below.

★ ★ ★ ★ ★
🌸

No reviews yet

Be the first to share your thoughts on this story!

← Previous Story ಒಂದು ಸಂಸಾರದ ಕಥೆ
Connect with Me