ಗುಂಡಿಯ ಹೊಸ ರುಚಿ

ಅಡುಗೆಮನೆಯ ಯಲ್ಲೇನೂ ಸಪ್ಪಳ .
ಡಬ ,ದಬ ಪಾತ್ರೆಗಳ ಗದ್ದಲ.
ಗುಂಡನಿಗೆ ತಿಳಿಯುತಿಲ್ಲ.ಏನೋ ನಡೀತಾ ಇದೆ.
ಗುಂಡಿ ಗಡಿಬಿಡಿಯಿಂದ ಅಡುಗೆ ಮನೆಯಲ್ಲಿ ಅವಸರಸರ ಓಡಾಡುತಿದ್ದಾಳೆ.ಮೆಲ್ಲನೆ ಬಾಗಿಲ ಸಂದಿಯಿಂದ ನೋಡಿದ.ಅಡುಗೆ ಮನೆತುಂಬ ಸಾಮಾನುಗಳು ಹರಡಿವೆ .
ಹೋ ಯಾವುದೋ ಹೊಸರುಚಿ ತಯಾರಿನಡೆದಿದೆ ಅಂತ ಅನಿಸಿಯೀ ಬೆವತ .🙄🙄
ಹಳೆಘಟನೆ ನೆನಪಿಗೆ ಬಂತು .
ಹೀಗೆ ಹಿಂದೆ ಗುಂಡಿ ಮಾಡಿದ ಯಾವುದೋ ಒಂದು ಹೊಸರುಚಿಗೆ ಬಲಿಪಶುವಾಗಿದ್ದ .ತಿಂದ ನಾಲಕು ದಿನ ಬಹಿರ್ದೆಸೆಗೆ ತಿರುಗಿ ತಿರುಗಿ ಸುಸ್ತಾಗಿ ಹೋಗಿದ್ದ. ಯಾವ ಹೊಸಅಡುಗೆ ಮಾಡಬೇಡ ತಾಯಿಅಂಥ ಕೈಮುಗಿದಿದ್ದ.ಅದೆಲ್ಲಾ ಮರೆತ ಪಾಕ ಪ್ರವೀಣೆ ಗುಂಡಿ ಮತ್ತೆ ಹೊಸಪ್ರಯೋಗಕ್ಕೆ ಕೈ ಹಾಕಿದ್ದಳು .
ನನ್ನಗ್ರಹಚಾರ ಸರಿ ಇಲ್ಲ ದೇವರೇ ...ಇವತ್ತು ಏನು ಕಾದಿದೆಯೋ ....ಅಂತ ಮನಸಲ್ಲೇ ಹೆದರಿದ .ಮುಂದೆನೂ ಮಾಡುವದು ?...ತಲೆಕೆದರಿಕೊಂಡ .
ಕೊಟ್ಟಿಗೆಯಿಂದ ಅಂಬಾ ...ಎಂಬ ಕೂಗು ...ಖುಷಿಯಾಯಿತು ಒಂದು ಕ್ಷಣಕ್ಕೆ .
"ಗೌರಿ ...ನನ್ನ ಆಪತ್ ಬಂಧು ..ಪಾರಾದೆ ಇವತ್ತು"
"ಏನ್ರಿ ..ಸ್ವಲ್ಪ ಹೀಗೆ ಬರ್ತೀರಾ "?..ಒಳಗಿನಿಂದ ಬಂದ ಧ್ವನಿಗೆ ಮೆಲ್ಲನೆ "ಬಂದೆ ..ಕಣೆ "..ಅಂದ.
ಹಿರಿ ಹಿರಿ ಹಿಗ್ಗುತ ಅದೇನೋ ಬೆಳ್ಳನೆಯ ಪದಾರ್ಥ ತಂದು ಇಟ್ಟಳು ಗುಂಡಿ .
ಅದೇನೆಂದು ತಿಳಿಯುತ್ತಿಲ್ಲ ಗುಂಡನಿಗೆ.
ಮೆತ್ತಗೆ "ಇದೇನೇ ...ಮತ್ತೊಂದು ಹೊಸ ರುಚಿ?..ಹೀ ..ಹೀ ..ತುಂಬಾ ಕಷ್ಟ ಪಟ್ಟೆ ಅನಿಸುತ್ತೆ...
"ಅಂತ ಹಲ್ಲು ಗಿಂಜಿದಾಗ "ಹೂಂ .
ರೀ ...ಆ ಪಕ್ಕದ ಮನೆ ರಾಣಿ ಮಾಡಿದ್ಲು ರೀ ...ಕೇಳಿದ್ರೆ ..ರೆಸಿಪಿ ಹೇಳಲಿಲ್ಲ. ನಾನು ಬಿಡ್ತೀನ ?...ಮಾಡೇ ಬಿಟ್ಟೇ..ತಿಂದು ನೋಡ್ರಿ "..ಅಂತ ಪಾತ್ರೆ ಮುಂದೆ ಜರುಗಿಸಿದಳು .ಪಾರಾಗುವ ದಾರಿ ಕಾಣಲಿಲ್ಲ ಗುಂಡನಿಗೆ .
ಅಯ್ಯೋ ..ಆ ರಾಣಿ ..ಹಾಗೆ ..ಸರಿ ಚೀನ್ನ ..ನೀ ಹೋಗು ..ನಾ. ..ತಿನ್ನುತೇನೆ "..ಮನದಲ್ಲೇ ಆ ರಾಣಿಗೆ ಹಿಡಿ ಶಾಪ ಬಿತ್ತು.
"ಸರಿ ..ನೀವು ತಿಂದು ನೋಡಿ ..ಹೇಗಿದೆ ಅಂತ ....ಮತ್ತೆ ಬೇಕಾದರೆ ಕೂಗಿ .".
"ಆಯ್ತು ..ಕಣೆ ..ನೀ ಹೊರಡು "
ಹಿಗ್ಗಿದ ಮೊಗದಿ ಒಳ ಹೋದ ಗುಂಡಿನಾ ನೋಡಿ ನಿರಾಳ ಉಸಿರು ಬಿಟ್ಟ ಗುಂಡ .
ಗೌರಿಯ ನೆನಪಾಯಿತು ..ಗುಂಡಿ ತಿರುಗಿ ಬರವದರಲ್ಲಿ ಆ ಹೊಸ ರುಚಿ ಕೊಟ್ಟಿಗೆ ಸೇರಿತ್ತು .☺️☺️☺️☺️

Leave a Review

Share your thoughts and read what others had to say

Your Review

Did this story spark a memory or artistic inspiration? Share your thoughts below.

★ ★ ★ ★ ★
🌸

No reviews yet

Be the first to share your thoughts on this story!

← Previous Story ಒಂದು ಸಂಸಾರದ ಕಥೆ
Connect with Me