ಗುಂಡಿಯ ಪ್ಲಾನ್ ಸಕ್ಸಸ್

ಟಿವಿ. ಮುಂದೆ ಕುಳಿತ ಗುಂಡಿಯ ಅಳು ತಾರಕಕ್ಕೇರಿತ್ತು. ಅಬ್ಬರಿಸಿ ,ಅಬ್ಬರಿಸಿ ಅಳುತಿದ್ದಳು.
ಅವಳ ಅಳುವಿನ ಶಬ್ದ ಕೇಳಿ ನೇಮ್ಮದಿಯಿಂದ ಮಲಗಿದ್ದ ಗುಂಡ ಗಾಬರಿಯಿಂದ ಎಗರಿ ಬಿದ್ದ.
"ಥತ್!...ಏನಾಯಿತಿವಳಿಗೆ ?...ಏನೋ ದೊಡ್ಡದೇ ಆಗಿರಬೇಕು . ಹಾಗೆಲ್ಲಾ ಸುಮ್ಮನೆ ವೀನಾ ಕಾರಣ ಅತ್ತು ದಣಿಯುವವಳಲ್ಲ...ಇರಲಿ ..ಸ್ವಲ್ಪ ಹೊತ್ತು ನೋಡೋಣ "..ಅಂತ ಮತ್ತೆ ಮುಸುಕೆಳೆದ.
ಹೂ ...ಹೂಂ ...ಅಳು ನಿಲ್ಲುವ ಲಕ್ಷಣಗಳೇ ಕಾಣುತಿಲ್ಲ....ಒಂದೇ ಸಮನೇ ಭೋರ್ಗರೆವ ಮಳೆಯಂತೆ ...ಇನ್ನು ತಾಳಲಾಗಲಿಲ್ಲ ಗುಂಡನಿಗೆ ...ನಿದಾನವಾಗಿ ಎದ್ದ ..
ಟಿವಿ ರೂಮಿನ ಸೋಫಾ ಪೂರ್ತಿ ಹರಡಿದಂತೆ ಕೂತ ಗುಂಡಿ ಸೊರ ಸೊರ ಸದ್ದು ಹೊರಡಿಸುತಿದ್ದಾಳೆ .
ಮುಂದೆ ಹಿಂದೆ ತಿಳಿಯದ ಗುಂಡ ಏನು ಮಾಡುವದೆಂದು ತಿಳಿಯದ ಮಂಗನಂತೆ ಆಕೆಯ ಮುಂದೆ ನಿಂತ.
"ಯಾಕೆ ...ಯಾಕೆ ..ಏನಾಯಿತು ಹೇಳೇ ?..."
"ಅಯ್ಯೋ ..ಹೀಗೆ ಟಿವಿ ಗೆ ಅಡ್ಡ ಬರಬೇಡಿ.
ನೋಡಿ ಅಲ್ಲಿ ..ಎಲ್ಲಾ ಮಿಸ್ ಆಯಿತು...ಪಾಪ ..ಆ ಅತ್ತೇನ ಸೊಸೆ ಗೋಳು ಹೊಯ್ಕೊಳ್ಳೋದು ನೋಡಿ...ಅದ ನೋಡಿ ತಡಿಯೋಕೆ ಆಗ್ತಿಲ್ಲರೀ...ಅದಕ್ಕೆ ಈ ಅಳು .."ಅಂತ ಮತ್ತೆ ಮುಸು ಮುಸು ಮಾಡಿದಳು.
ಗುಂಡನ ಮನಸ್ಸು ನಿನ್ನೆ ನಡೆದ ಸಂಭಾಷಣೆ ನೆನೆಯಿತು .
ನಿನ್ನೆ ದಿನ ಊರಿಂದ ಅಮ್ಮ ತನ್ನ ನೋಡಲು ಬರುವದಾಗಿ ಫೋನ್ ಮಾಡಿದ್ದಳು.
ಗುಂಡಿಗೆ ಅದರ ಸುಳಿವು ಸಿಕ್ಕಿಲ್ಲ ಅಂತ ಅಂದುಕೊಂಡಿದ್ದು ತಪ್ಪಾಗಿತ್ತು.ಮೆತ್ತಗೆ ಗುಂಡಿ ಗುಂಡನಿಗೆ ಟಿವಿ ನೋಡುತ್ತಲೇ ತನ್ನ ಸಂದೇಶ ರವಾನಿಸಿದ್ದಳು.
ತನ್ನ ಅಮ್ಮ ಬಂದರೆ ಏನಾಗುವದು ಅಂತ ತಿಳಿದ ಗುಂಡ ,ಅಮ್ಮನಿಗೆ ಬರಬೇಡ ಅಂತ ತಿಳಿಸುವದು ವಾಸಿ ಅಂದುಕೊಂಡು "ಈಗ ಬರ್ತೆನೆ "ಅಂತ ಮೆತ್ತಗೆ ಫೋನ್ ಮಾಡಲು ಜಾರಿದ.
ತನ್ನ ಮಾತೇ ಗೆದ್ದ ಖುಷಿಯಲಿ ಗುಂಡಿ ,ತಿಂಡಿ ತಟ್ಟೆ ಹಿಡಿದು ಚಾನೆಲ್ ಚೇಂಜ್ ಮಾಡಿದಳು.☺☺☺☺

Leave a Review

Share your thoughts and read what others had to say

Your Review

Did this story spark a memory or artistic inspiration? Share your thoughts below.

★ ★ ★ ★ ★
🌸

No reviews yet

Be the first to share your thoughts on this story!

← Previous Story ಒಂದು ಸಂಸಾರದ ಕಥೆ
Connect with Me