ಅಂತರಂಗದ ತೆರೆ ಸರಿದಾಗ
ಕಣ್ಣೀರ ಧಾರೆ ಅಪೇಕ್ಷಳ ಕಣ್ಣಲ್ಲಿ .ಪಕ್ಕದಲ್ಲೇ ಕುಳಿತಿದ್ದ ತನ್ನಿನಿಯನನ್ನು ನೋಡಲು ಇಷ್ಟವಿಲ್ಲ ಆಕೆಗೆ ..ಬಲವಂತದ ಮದುವೆಯದು ..ಗಟ್ಟಿಮೇಳ...ಗಟ್ಟಿಮೇಳ...ಪೂರೋಹಿತರ ಧ್ವನಿ.ಪಕ್ಕದಲ್ಲಿದ್ದ ಕಿರಣ್ ಕೈಗೆ ತಾಳಿ ಬಂತು...ಬೇಗ ಕಟ್ಟಪ್ಪ ..ಧ್ವನಿಯೊಂದು …
Read More →ಒಮ್ಮೆ ಅಸಮಾಧಾನ ಮನದಲ್ಲಿ ತುಂಬಿದರೆ ಮುಗಿಯಿತು.ಅದು ಹಠ ಮಾಡುವ ಮಗುವಿನಂತೆ.ಚಂಡಿ ಹಿಡಿದು ಬಿಡುತ್ತದೆ.ತನಗೆ ಬೇಕೆನಿಸಿದ್ದು ಸಿಗುವವರೆಗೂ ಬಿಡುವದಿಲ್ಲ.ಪ್ರತಿ ಕ್ಷಣ ಅದರದೇ ಧ್ಯಾನವಾಗುತ್ತದೆ.
ನಿಶಾಳ ಮನದ ಅಸಮಾಧಾನ ಕೂಡ ಇಲ್ಲಿ ಹಾಗೇ ಮಾಡಿತ್ತು.
ಐಷಾರಾಮದ ಜೀವನದ ಕನಸು ಆಕೆಯದು.ಕಾರು,ಬಂಗ್ಲೆ, ಕೈಗೊಂದು ಕಾಲಿಗೊಂದು ಆಳು,ಮೈ ತುಂಬಾ ಒಡವೆಗಳ ಹೇರಿಕೊಂಡು,ಜರತಾರಿ ಸೀರೆ ಉಟ್ಟು ಬಿಮ್ಮನೆ ಜೋರು ಮಾಡುತ್ತಾ ತಿರುಗಾಡ ಬೇಕೆನ್ನುವ ಆಕೆಯ ಬಯಕೆ ಹಾಗೇ ಉಳಿದಿತ್ತು..ತನ್ನಂಥ ಸುಂದರಿಗೆ ತಕ್ಕಂಥ ಮನೆ ಸಿಗಲಿಲ್ಲ..ಹೋಗಿ ಹೋಗಿ ಎಂಥ ಸಾಧಾರಣ ಮನೆ ಇದು?..ನನ್ನ ಸೌಂದರ್ಯ ನೋಡಿ ಸಿನಿಮಾದಲ್ಲಿ ಬರುವಂತೆ
ಶ್ರೀಮಂತ ಯುವಕ ಕೈ ಹಿಡಿಯಬಾರದಿತ್ತೇ ?...ಈ ಅಸಮಾಧಾನ ಆಗಾಗ ಒಳಗೊಳಗೇ ಹೆಡೆಯೆತ್ತಿ ಬುಸುಗುಟ್ಟುತಿತ್ತು...ಕಿಡಿ ಹತ್ತಿದ ಹುಲ್ಲಿನಂತೆ
ಹೊಗೆ ಒಳಗೆ ಆಡುತಿತ್ತು. ಬೇರೆಯವರ ದೊಡ್ಡ ದೊಡ್ಡ ವಾಹನಗಳ ನೋಡಿ ಹೊಟ್ಟೆ ಉರಿಸಿಕೊಳ್ಳುತಿದ್ದಳು .
ತನ್ನೆಲ್ಲ ಸಿಟ್ಟನ್ನು ಗಂಡನ ಮೇಲೆ, ಪುಟ್ಟ ಮಗಳ ಮೇಲೆ ಹಾಕುತ್ತಿದ್ದಳು.ವಿನಾ ಕಾರಣ ಸಿಡುಕುತಿದ್ದಳು.ಆದಕ್ಕಾಗಿ ಆ ಪುಟ್ಟ ಮಗು ತಂದೆಯನ್ನೇ ಹೆಚ್ಚು ಹಚ್ಚಿಕೊಂಡಿತ್ತು.ಪ್ರಶಾಂತ್ ನಾದರೂ ಮಗಳೆಂದರೆ ಸಾಕು ಜೀವ ಬಿಡುತಿದ್ದ.
ಯಾಕೆ ಆ ಮಗುವಿನ ಮೇಲೆ ಹಾಗೆ ರೇಗುತ್ತಿ?.
ಅಂತ ತಪ್ಪಿ ಏನಾದರೂ ಹೇಳಿದರೆ ಮುಗಿಯಿತು ಅವತ್ತು ಅವನ ಕತೆ. ಹುಲಿಯಂತೆ ಆತನ ಮೇಲೆ ಎಗರುತಿದ್ದಳು ನಿಶಾ.
ಹೌದುರೀ..ನಾನು ಅವಳಿಗೆ ಮಲ ತಾಯಿ ಅಲ್ಲವೇ?ಅದಕ್ಕೆ ಹಾಗೆ..
ಮುಂದೆ ಮಾತಾಡಿದರೂ ಪ್ರಯೋಜನವಿಲ್ಲ ಅಂತ ತೆಪ್ಪಗಾಗುತಿದ್ದ ಪ್ರಶಾಂತ್.
ಹೆಂಡತಿಯ ದುಮುಗುಟ್ಟುವ ಮುಖಕ್ಕೇ ಹೆಚ್ಚು ಕಡಿಮೆ ಹೊಂದಿಕೊಂಡು ಬಿಟ್ಟಿದ್ದ.ಇದು ನನ್ನ ಕರ್ಮಾ..ಅನುಭವಿಸಬೇಕು...ಬೇರೆ ದಾರಿ ಇಲ್ಲ ಅಂತ ಆ ಹೆಂಗರುಳಿನವ ಅರ್ಥ ಮಾಡಿಕೊಂಡು ಬಿಟ್ಟಿದ್ದ.
ನೋಡುವವವರ ಕಣ್ಣಿಗೆ ಸುಖಿ ಸಂಸಾರ ಆತನದು.
ಬೆಂಗಳೂರಿನಲ್ಲಿ ಸ್ವಂತ ಮನೆ, ದೊಡ್ಡ ಕಂಪನಿಯಲ್ಲಿ ಕೆಲಸ, ಮಗಳು, ಸುಂದರ ಹೆಂಡತಿ..
ಇನ್ನೇನು ಬೇಕು ಇದಕ್ಕಿಂತ ಅಂತ ನೋಡುಗರ ಮನಸ್ಸು.
ಆದರೆ ಇದ್ದ ಸಮಸ್ಯೆ ಬೇರೆಯದೇ..
ಪ್ರಶಾಂತನಿಗೂ ಸಮಾಧಾನವಿಲ್ಲ.ನಿಷ್ಚಿಂತೆಯಿಲ್ಲ.ಆದರೂ .ಸುಮ್ಮನೆ ನಡೆದಿತ್ತು ಯಾಂತ್ರಿಕ ಜೀವನ ...ನಿಶಾ ಹೀಗೆ ಅಂತ ಯಾರ ಬಳಿಯೂ ಬಾಯಿ ಬಿಟ್ಟವನಲ್ಲ.ಅವಳ ಬಗ್ಗೆ ತುಂಬಾ ತಲೆ ಕೆಡಿಸಿಕೊಂಡವನಲ್ಲ.
ಇವತ್ತಲ್ಲ ನಾಳೆ ಎಲ್ಲ ಸರಿ ಹೋದೀತು ಅನ್ನೋ ಭರವಸೆ ಆತನಿಗೆ.
ಇವತ್ತು ಸಂಜೆ ಲಾಲ್ ಭಾಗ ಕಡೆ ಹೋಗಿ ಬರೋಣ ಕಣೆ..
ಹೆಂಡತಿಯ ಮೂಡು ಸರಿ ಮಾಡುವ ಪ್ರಯತ್ನ ಅವನದು.
ಮಾತಾಡಲಿಲ್ಲ ನಿಶಾ.ಹಾಗೆ ಎಂ.ಟಿ.ರ್ ನಲ್ಲಿ ಮಸಾಲೆ ದೋಸೆ ತಿಂದು ಬರೋಣ.ಮಸಾಲೆ ದೋಸೆ ಅಂದ್ರೆ ಪ್ರಾಣ ನಿಶಾಳಿಗೆ.ಕೆಂಪು ಕೆಂಪಾದ ದೋಸೆ ಮುರಿದು, ಅದರ ಹೊಟ್ಟೆಯೊಳಗಿದ್ದ ಆಲೂಗಡ್ಡೆ ಪಲ್ಯ ಸೇರಿಸಿ,ಚಟ್ನಿಯಲ್ಲಿ ಅದ್ದಿ ಬಾಯಿಗಿಟ್ಟರೆ ಬ್ರಹ್ಮಾಂಡ ಅನ್ನುತ್ತಿದ್ದಳು.
ಮಸಾಲೆ ದೋಸೆ ಇಲ್ಲಿ ಕೆಲಸ ಮಾಡಿತ್ತು.
ಸರಿ..ಎಷ್ಟು ಗಂಟೆಗೆ ಹೊರಡೋದು?
ನಾನು ಆಫೀಸಿನಿಂದ ಬೇಗ ಬರುವೆ.ನಾಳೆ ಹೇಗಿದ್ದರೂ ಭಾನುವಾರ..ಬೆಳಿಗ್ಗೆ ಏಳೋ ಅವಸರವಿಲ್ಲ ..ನಿಧಾನಕ್ಕೆ ಸುತ್ತಾಡಿ ಬಂದರಾಯಿತು .ನೀನು ,ಪಾಪು ಬೇಗ ರೆಡಿ ಆಗಿ.ತಿಂಡಿನೂ ಮಾಡೋ ಗೋಜಿಗೆ ಹೋಗಬೇಡ.
ಬರೀ ಒಳ್ಳೆ ಕಾಫಿ ಮಾಡು.ಕುಡಿದು ಹೋಗೋಣ ಸರಿನಾ?
ಕೆಂಪು ಕೆಂಪಾದ ಹೆಂಡತಿಯ ತುಟಿಗಳ ಕಡೆ ನೋಡಿದ .. ಮುತ್ತನ್ನೊತ್ತುವ ಆಸೆ ಅವನಿಗೆ.ಅದಕ್ಕವಕಾಶ ನೀಡದಂತೆ ನಿಶಾ ಪಟ್ಟನ್ನೇ ಎದ್ದಳು.
ಬಡ ನಡು ಬಳುಕಿಸಿ, ಮಾರುದ್ದ ಜಡೆ ಅಲ್ಲಾಡಿಸುತ್ತ ಒಳ ನಡೆದಿದ್ದಳು.ಆಕೆ ಉಟ್ಟ ಸೀರೆ ಇವನನ್ನು ಸೋಕಿದಾಗ ಅದಕ್ಕೆ ತುಟಿ ಸ್ಪರ್ಶಿಸಿ ತೃಪ್ತಿ ಪಟ್ಟುಕೊಂಡ.ಸುಂದರಿ ನನ್ನ ಹೆಂಡತಿ..ಸ್ವಲ್ಪ ಮೊಂಡಿ..ಪರವಾಗಿಲ್ಲ ಅಡ್ಜಸ್ಟ್ ಮಾಡಿಕೊಳ್ಳೋಣ.ಅಂತ ತಲೆ ಕೂದಲಲ್ಲಿ ಕೈ ಆಡಿಸಿಕೊಂಡ.
ಮರುದಿನ ಬೆಳಿಗ್ಗೆ ಇನ್ನು ಹಾಸಿಗೆಯಲ್ಲೇ ಇದ್ದ ಗಂಡನ್ನ ಕೂಗಿದಳು.
ರೀ...ಬೆಳಗಾಯಿತು ..ನೀವೂ ಎದ್ದು, ಪಾಪುಗೂ ಎಬ್ಬಿಸಿ ರೆಡಿ ಆಗಿ.
ಪ್ರಶಾಂತ್ ಕಣ್ಣು ಬಿಟ್ಟು ನೋಡಿದರೆ ಹೆಂಡತಿಯದು ಆಗಲೇ ಸ್ನಾನವಾಗಿದೆ.ತಲೆ ಸ್ನಾನ ಮಾಡಿ ಟವೆಲ್ ಸುತ್ತಿದ್ದಾಳೆ ತಲೆಗೆ.ಬೆಳದಿಂಗಳಿನಂಥ ಮೈ ಬಣ್ಣ ಬಿಸಿ ನೀರಿಗೆ ಕೆಂಪಾಗಿದೆ.ಕಪ್ಪನೆಯ ಸೀರೆಯಲ್ಲಿ ಧರೆಗಿಳಿದು ಬಂದ ಅಪ್ಸರೆಯಂತೆ ಕಾಣುತ್ತಿದ್ದಳು...ಮದುವೆ ಆಗಿ ಬರೀ ೭ ವರ್ಷಗಳಾಗಿದ್ದವು ..ವಯೋ ಸಹಜ ಬಯಕೆ ಹೆಡೆಯೆತ್ತಿತು ....ಸೀರೆಯ ಮರೆಯಲ್ಲಿ ಕಾಣುತಿದ್ದ ಬಿಳಿ ಸೊಂಟಕ್ಕೆ ಕೈ ಹಾಕಿ ತನ್ನೆಡೆ ಎಳೆದುಕೊಂಡ.ಅವನು ಎಳೆದ ರಭಸಕ್ಕೆ ಜೋಲಿ ಹೋಗಿ ಅವನ ಹರವಾದ ಎದೆಯ ಮೇಲೆ ಬಿದ್ದಳು.ಕಟ್ಟು ಮಸ್ತಾದ ದೇಹ ಅವನದು.ಬಿಗಿಯಾಗಿ ಬಾಹುಗಳಿಂದ ಅವಳನ್ನು ಬಿಗಿದ .ಕೂದಲಲ್ಲಿದ್ದ ನೀರು ಇವನ ಮುಖಕ್ಕೆ
ಸಿಂಪರಣೆಯಾಯಿತು..ಹಾಗೆಯೇ ನೀರನ್ನು ಒರೆಸಿಕೊಂಡ.
ಅಷ್ಟು ಹೊತ್ತಿಗಾಗಲೇ ಸಿಟ್ಟು ನೆತ್ತಿಗೇರಿತವಳಿಗೆ....ಬಿಡಿಸಿಕೊಳ್ಳಲು ಕೊಸರಾಡಿದಳು ..ಆಗಲಿಲ್ಲ ..ಏನಿದು ಹುಡುಗಾಟ ? ಹೀಗೆ ನೀವು?.ಗಲೀಜು ..ಮುಖ ಕೂಡ ತೊಳೆದಿಲ್ಲ. ..ನಾನು ಫ್ರೆಶ್ ಆಗಿದ್ದೆ..ಬಿಡಿ ಅಂತ ಅಂದರೂ ಬಿಡದೇ ನಿನ್ನೆಯಿಂದ ಬಾಕಿ ಇದ್ದ ಮುತ್ತನ್ನು ಪಡೆದೇ ಬಿಟ್ಟ.
ಗಂಡನ್ನ ಸಿಟ್ಟಿನಿಂದ ಜೋರಾಗಿ ನೂಕಿ ನಾನು ಎಲ್ಲೂ ಬರಲ್ಲ ನೀವೇ ಹೋಗಿ..ಎಲ್ಲ ಮೂಡ್ ಹಾಳು ಮಾಡಿದಿರಿ.
ಸಿಟ್ಟಿನಿಂದ ಎದ್ದ ಹೆಂಡತಿಯ ನೋಡಿ ನಕ್ಕ.
ಏನು ನಗ್ತಿದ್ದೀರಾ ?ಛೆ!!ಅಂದು ಒಳ ಹೋದಳು.ಇನ್ನು ಬಾಕಿ ಇದೆ ಕಣೆ ನಗುತ್ತಲೇ ಮಗುವಿನ ಕಡೆ ನೋಡಿದ.ಗೋಡೆಗೆ ಅನಿಸಿಕೊಂಡು ಮಲಗಿದೆ.ಜೋರಾದ ನಿದ್ದೆ ಅದಕ್ಕೆ.ದಿನ ಬೆಳಗಾದರೆ ಶಾಲೆಗೆ ಹೋಗುವ ಅವಸರ ಅದಕ್ಕೆ.ನಿದ್ದೆಗಣ್ಣಲ್ಲೇ ದುಡು ಬುಡು ಅಂತ ಮನೆಯಲ್ಲ ಓಡಾಡಿ,ನಿದ್ದೆಯಲ್ಲೇ ಹಾಲು ಕುಡಿದು, ತೂಕಡಿಸುತ್ತ ಬ್ಯಾಗ್ ಹಿಡಿದು ಸ್ಕೂಲ್ ಬಸ್ ಏರುತಿತ್ತು.ಬಸ್ಸಿನ ಕಿಟಕಿಗೆ ಒರಗಿ ತನ್ನ ನಿದ್ದೆ ಮುಂದುವರೆಸುತಿತ್ತು.ಸ್ಕೂಲ್ ಬಂದಾಗ ಆಯಾನೇ ಎಬ್ಬಿಸಿ, ಕ್ಲಾಸ್ಸ್ರೂಮ್ ತಲುಪಿಸುತಿದ್ದಳು.
ಅವಳನ್ನು ತಯಾರು ಮಾಡಿ ಕಳಿಸುವವದರಲ್ಲಿ ನಿಶಾ ಹಾರಾಡಿ, ಚೀರಾಡಿ ತಲೆ ಕೆಡಿಸಿಕೊಳ್ಳುತಿದ್ದಳು .ಅಮ್ಮನ ಮುಖ ನೋಡಿ ಹೆದರಿ ಅದು ಅಪ್ಪನನ್ನೇ ಹಿಡಿಯುತಿತ್ತು ..
ನೀನೇ ಬಾ ಪಪ್ಪಾ..ನೀನೇ ಸ್ನಾನ ಮಾಡಿಸು ಅಂತ ಗಂಟು ಬೀಳುತಿತ್ತು.ನಗುತ್ತಲೇ ಪ್ರಶಾಂತ್ ಅದನ್ನು ಎತ್ತಿಕೊಂಡು ಮುದ್ದು ಮಾಡುತ್ತ, ಬಾತ್ರೂಮ್ ಕಡೆ ಹೆಜ್ಜೆ ಹಾಕುತಿದ್ದ.
ಅದರ ಪುಟ್ಟ ಕೂದಲನ್ನು ಬಾಚಿ ಸೊಟ್ಟ ಪಟ್ಟ ಜುಟ್ಟು ಹಾಕಿದಾಗ ,ಪಪ್ಪಾ ಸೊಟ್ಟ ಹಾಕಿದಿಯ ನೋಡು ಅಂತ ಹೇಳುತಿತ್ತು.
ಅದಕ್ಕೆ ನಾನು ಹೇಳೋದು, ಜುಟ್ಟು ಗಿಟ್ಟು ಎಲ್ಲ ಬೇಡ.ನೀಟಾಗಿ ಬಾಬ್ ಕಟ್ ಮಾಡಿಸ್ತೀನಿ ಅಂತ ನಿಶಾ ಹೇಳಿದಾಗ, ಪ್ರಶಾಂತ್ ಹೆಣ್ಣು ಮಕ್ಕಳಿಗೆ ತಲೆ ತುಂಬಾ ಕೂದಲಿದ್ದರೆ ಚೆನ್ನ..ಈಗ ನಿನ್ನ ಜಡೆ ನೋಡು ಹೇಗಿದೆ?ಬಾ ಇಲ್ಲಿ....
ಅಂತ ಹೆಂಡತಿಯ ಕರೆದರೆ ನಿಮಗೆ ಬೇರೆ ಕೆಲಸವಿಲ್ಲ ಅಂತ ಒಳಗೆ ಹೋಗಿ ಬಿಡುತಿದ್ದಳು.
(ಸೂಪರ್ ಸಾಹಿತಿಗಾಗಿ ಬರೆಯುತ್ತಿರುವ ಈ ಧಾರಾವಾಹಿಗೆ ನಿಮ್ಮ ಬೆಂಬಲದ ನಿರೀಕ್ಷೆಯಲ್ಲಿದ್ದೇನೆ.ಸಹೃದಯ ಓದುಗರು ಓದಿ ಹರಸಬೇಕೆಂದು ಕೇಳಿಕೊಳ್ಳುವೆ.)
Share your thoughts and read what others had to say
Did this story spark a memory or artistic inspiration? Share your thoughts below.
Be the first to share your thoughts on this story!