ಪ್ರೇಮದ ಸುಳಿಯಲ್ಲಿ

ಭಾಗ- ೨

ಕಾಲೇಜು ಮುಗಿಸಿ, ಮನೆ ಕಡೆ ಹೋಗಲು ಕಾರು ಹತ್ತಿದಳು ಅಮೂಲ್ಯ. ಉಟ್ಟಿರುವ ಕೆಂಪು ಸೀರೆ ಒಮ್ಮೆ ಕೊಡವಿ, ಕಾರು ಹತ್ತಿದಳು ..ಸೀರೆಯಲ್ಲಿ ರತಿಯಂತೆ ಕಾಣುತ್ತಿರುವ ಆಕೆಯನ್ನು ಚುಡಾಯಿಸುವ ಹುಡುಗರ ದಂಡು.
ಈ ಹೂವು ಯಾರ ಪಾಲೊ?

ಅಸಭ್ಯ ಮಾತುಗಳು, ಅಸಭ್ಯ ನಡುವಳಿಕೆಗಳು ...
ಎಲ್ಲರ ಕಣ್ಣು ತನ್ನ ಮೇಲೆ ಅಂತ ಗೊತ್ತಿತ್ತು ಅಮುಲ್ಯಳಿಗೆ ..ಆದರೂ ತನ್ನದೇ ಜಗತ್ತಲ್ಲಿ ಇರುತ್ತಿದ್ದಳು.ತನ್ನ ಅಪೂರ್ವ ಸೌಂದರ್ಯದ ಬಗ್ಗೆ ಯಾವ ಹೆಮ್ಮೆಯೂ ಇರಲಿಲ್ಲ. ಅದೊಂದು ಭಗವಂತ ಕೊಟ್ಟಿರೋದು ಅಷ್ಟೇ..! ತುಂಬಾ ವಿಚಾರವಂತೆ ಆಕೆ. ತನ್ನ ವಯಸ್ಸಿನವರು ಸುಂದರವಾಗಿ ಕಾಣಲು ಇಲ್ಲದ ಸರ್ಕಸ್ ಮಾಡುವದ ಕಂಡಿದ್ದಾಳೆ. ಇಷ್ಟೆಲ್ಲ ಒಳ್ಳೆ ಗುಣಗಳಿದ್ದರೂ ಒಂದೇ ಒಂದು ಕೆಟ್ಟ ಗುಣ ಅವಳಲ್ಲಿ ಮನೆ ಮಾಡಿತ್ತು..ಅದೇನೆಂದರೆ ಸಿರಿವಂತಿಕೆಯ ಗರ್ವ, ಹಮ್ಮು,ಬಿಗುಮಾನ ಅಲ್ಪ ಸ್ವಲ್ಪ ಧಿಮಾಕೂ ಸೇರಿತ್ತು. ಬಹುಷಃ ತಂದೆಯಿಂದ ಬಳುವಳಿಯಾಗಿ ಬಂದಿತ್ತೇನೋ? ಗೊತ್ತಿಲ್ಲ ..ಹಣವಂತರಿಗೆ ಕೊಡುವ ಮರ್ಯಾದೆ ಅವಳಲ್ಲಿ ಬೇರೆಯೇ ಆಗಿತ್ತು..ಎಲ್ಲಿ ಹೋದರೂ ಆ ಗುಣ ಅವಳಲ್ಲಿ ಎದ್ದು ಕಾಣುತಿತ್ತು
..
ಅಮೂಲ್ಯ ಬೆಳೆದಂತೆ ಈ ಗುಣ ತಾಯಿ ಸೌಭಾಗ್ಯಮ್ಮನ ಅರಿವಿಗೆ ಬಂದಿತ್ತು...ಏನೋ ಮುಂದೆ ಸರಿ ಹೋಗಬಹುದು ಎಂದುಕೊಂಡಿದ್ದರು.ಆದರೆ ತಂದೆ ವೆಂಕಟೇಶರಾಯರಿಗೆ ಅದೊಂದು ಹೆಮ್ಮೆಯ ವಿಚಾರ..ನನ್ನ ಮಗಳು ಯಾರನ್ನೂ ಸುಲಭದಲ್ಲಿ ಹತ್ತಿರಕ್ಕೆ ಬಿಡುವವಳಲ್ಲ ..ಆಸ್ತಿ, ಅಂತಸ್ತು ನೋಡಿಯೇ ಮಾತಾಡುವವಳು. ನನ್ನಂತೆ!!......ಅಂತ ಹೆಮ್ಮೆಯಿಂದ ಹೇಳುತ್ತಿದ್ದರು .ಶಹಬಾಷ್ ..!! ಮನದಲ್ಲೇ ಅವಳಿಗೆ ಹೇಳುತ್ತಿದ್ದರು.

ಮಗಳು ಮನೆಯಲ್ಲಿರುವ ಆಳು ಕಾಳುಗಳನ್ನು ಒಂದು ಮಾರು ದೂರ ನಿಲ್ಲಿಸಿ ಮಾತಾಡಿಸುವದ ಹಿಂದೆ ನಿಂತು ನೋಡಿದ್ದರು....ದುಡ್ದು ಇದ್ದರೆ ಜನ
ಬೆಲ್ಲಕ್ಕೆ ಮುತ್ತುವ ಇರುವೆಗಳಂತೆ ..ದುಡ್ಡಿದ್ದರೆ ಎಲ್ಲ ಇದ್ದಂತೆ.....ಎಂದೇ ಅವರ ಕಲ್ಪನೆ. ಯಾವುದಕ್ಕೂ ಯಾರ ಬಗ್ಗೆಯೂ ಮುಲಾಜಿಗೆ ಒಳಗಾದವರಲ್ಲ. ..
ದುಡ್ಡು ಕೊಟ್ಟರೆ ಯಾರಾದರೂ ಕೆಲಸಕ್ಕೆ ಬರುತ್ತಾರೆ...ಕೆಲಸ ಮಾಡಿಸಿಕೊಂಡು ,ದುಡ್ಡು ಕೊಟ್ಟರೆ ಮುಗಿಯಿತು. ಅದು ಬಿಟ್ಟು ಅವರ ಕಷ್ಟ, ಸುಖ, ನಗು, ಅಳು ತಗೊಂಡು ಏನು ಮಾಡಬೇಕು?ಮಾಲೀಕರು ಬಿಗಿ ಆಗಿ ಇರಬೇಕು..ಅದೇ ತತ್ವವನ್ನು ಹೆಂಡತಿಗೆ, ಮಗಳಿಗೆ ಹೇಳುತ್ತಿದ್ದರು..ಹಣವನ್ನು ಹೇಗೆ, ಎಲ್ಲಿ ಖರ್ಚು ಮಾಡಬೇಕು? ಹಣವಿದೆ ಅಂತ ಬೇಕಾ ಬಿಟ್ಟಿ ಖರ್ಚು ಮಾಡುವದಲ್ಲ ....ಹಾಗೆ.. ಹೀಗೆ.....
ಅವರ ಈ ಎಲ್ಲ ಮಾತುಗಳು
ಮಗಳಾದ ಅಮೂಲ್ಯಾಗೆ ಇದೆಲ್ಲ ಹಿಡಿಸಿದರೆ, ಸೌಭಾಗ್ಯಮ್ಮ ಸುಮ್ಮನೆ ತಲೆ ಆಡಿಸಿ ಬಿಡುತ್ತಿದ್ದರು ..ಬಿಗಿ ವ್ಯಕ್ತಿತ್ವದ ಗಂಡ ಯಾವತ್ತೂ ತನ್ನ ಮಾತನ್ನು ಕೇಳುವದಿಲ್ಲ ,ತನ್ನ ಒಳ ಭಾವನೆಗಳನ್ನು ತಿಳಿದುಕೊಳ್ಳುವುದಿಲ್ಲ ಅಂತ ಚೆನ್ನಾಗಿ ಗೊತ್ತಿದ್ದರಿಂದ ಆ ಪ್ರಯತ್ನಕ್ಕೆ ಕೈ ಹಾಕುವದ ಬಿಟ್ಟಿದ್ದರು ..ಮದುವೆ ಆದ ಮೊದಲ ಸ್ವಲ್ಪ ವರ್ಷ ತಮ್ಮ ಪ್ರಯತ್ನ ಮಾಡಿದ್ದರು ..ಆದರೆ ಅದರಿಂದ ಏನೂ ಉಪಯೋಗವಿಲ್ಲ ಅಂತ ಅರ್ಥವಾಗಿ ಸುಮ್ಮನಿರುವುದೇ ಲೇಸು ಅಂತ ಅಂದುಕೊಂಡರು ..ತಾವು ಮಾತ್ರ ತಮ್ಮ ಕೈಲಾದ ಸಹಾಯ ಮಾಡಬೇಕು ಅನ್ನೋ ನಿರ್ಧಾರಕ್ಕೆ ಅಂಟಿಕೊಂಡಿದ್ದರು.ಒಳಗೆ ಗಂಡನ ಹೆದರಿಕೆ
ಇದ್ದರೂ ಕೂಡ ಹಾಗೆಯೇ ನಡೆದುಕೊಳ್ಳುತ್ತಿದ್ದರು.ಯಾಕೋ ಅವರ ಮನೋಧರ್ಮ ಗಂಡನ ತತ್ವಕ್ಕೆ ಒಪ್ಪಿರಲಿಲ್ಲ.

ಹಾಗೆ ನೋಡಿದರೆ ವೆಂಕಟೇಶರಾಯರೇನು ಹುಟ್ಟಿನಿಂದ ಶ್ರೀಮಂತರೇನಲ್ಲ ..ಕಷ್ಟ ಪಟ್ಟೇ ಮುಂದೆ ಬಂದವರು. ಅದೇನು ಸೌಭಾಗ್ಯಮ್ಮನ ಕಾಲು ಗುಣವೋ? ಗೊತ್ತಿಲ್ಲ..ಸೌಭಾಗ್ಯಮ್ಮ ಮದುವೆ ಮಾಡಿಕೊಂಡು ಮನೆ ಪ್ರವೇಶ ಮಾಡಿದಾಗಿಂದ ,ಏಳಿಗೆ ಅವರೊಂದಿಗೆ ಪ್ರವೇಶ ಮಾಡಿದಂತಿತ್ತು ....ಲಕ್ಷ್ಮಿ ನಗು ನಗುತ್ತ ಇವರ ಮನೆ ಒಳಗೆ ಅಡಿ ಇಟ್ಟಿದ್ದಳು ....
ಹಾಗೆ ಬಂದವಳು ಮತ್ತೆ ಬೇರೆ ಕಡೆ ಲಕ್ಷ್ಮಿ ಹೋಗಲೇ ಇಲ್ಲ..ಆಕೆಗೆ ಆ ಮನೆ, ಮನೆ ಒಡತಿ ತುಂಬಾ ಹಿಡಿಸಿತ್ತೋ? ನಗು ನಗುತ್ತ ಇರುವ
ಆ ಮನೆ ಒಡತಿ ಲಕ್ಷ್ಮಿಯ ಸ್ವರೂಪದವಳೇ
ಆಗಿದ್ದರು. ತುಂಬಿ ತುಂಬಿ ಆ ಮನೆಗೆ ಶ್ರೀಮಂತಿಕೆಯನ್ನು ನೀಡಿದಳು. ಮುಂದೆ ಅಮೂಲ್ಯ ಹುಟ್ಟಿದ ಮೇಲಂತೂ ಮತ್ತೂ ಉತ್ತುಂಗಕ್ಕೆ ಏರಿದ್ದರು ...ಅಷ್ಟು ಹಣವಿದ್ದರೂ ,ತನ್ನ ಗುಣವನ್ನು ಸೌಭಾಗ್ಯಮ್ಮ ಬದಲಿಸಿಕೊಳ್ಳಲಿಲ್ಲ .ಮೊದಲಿಂದಲೂ ಒಳ್ಳೆ ಮನದಾಕೆ ಆಗಿದ್ದ ಆಕೆ ಮುಂದೆಯೂ ಅದನ್ನೇ ಉಳಿಸಿ, ಬೆಳೆಸಿಕೊಂಡರು..
ಅದಕ್ಕೆ ತತವಿರುದ್ದವಾಗಿ ಬೆಳೆದರು ವೆಂಕಟೇಶರಾಯರು ...

ಮುಂದುವರೆಯುವುದು ....

Leave a Review

Share your thoughts and read what others had to say

Your Review

Did this story spark a memory or artistic inspiration? Share your thoughts below.

★ ★ ★ ★ ★
🌸

No reviews yet

Be the first to share your thoughts on this story!

← Previous Story ಗುಂಡ ಗುಂಡಿಯ ಹಾಸ್ಯ ಪ್ರಸಂಗಗಳು
Connect with Me